Home » ಯಾಸೀನ್‌ ಭಟ್ಕಳ್‌ ಸೇರಿ ಐವರಿಗೆ ಗಲ್ಲು ಶಿಕ್ಷೆ
 

ಯಾಸೀನ್‌ ಭಟ್ಕಳ್‌ ಸೇರಿ ಐವರಿಗೆ ಗಲ್ಲು ಶಿಕ್ಷೆ

ಹೈಕೋರ್ಟ್‌ ತೀರ್ಪು

by Kundapur Xpress
Spread the love

ಹೈದರಾಬಾದ್ : 2013ರ ಹೈದರಾಬಾದ್  ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿ ಯನ್ ಮುಜಾಹಿದ್ದೀನ್ ಸಂಘಟನೆಯ ಯಾಸಿನ್ ಭಟ್ಕಳ್ ಸೇರಿದಂತೆ ಐವರಿಗೆ ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.

2013ರ ಫೆಬ್ರವರಿ 21 ರಂದು ನಗರದ ಜನದಟ್ಟಣೆಯ ಶಾಪಿಂಗ್‌ ಪ್ರದೇಶವಾದ ದಿಲ್ ಸುಮ್‌ ನಗರದಲ್ಲಿ ಅವಳಿ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ 18 ಮಂದಿ ಸಾವನ್ನಪ್ಪಿದ್ದರೆ, 131 ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ 2016ರ ಡಿಸೆಂಬರ್ 13 ರಂದು ವಿಚಾರಣಾಧೀನ ನ್ಯಾಯಾಲಯ ಕರ್ನಾಟಕದ ಭಟ್ಕಳ ಮೂಲದ ಮೊಹದ್ ಅಹ್ಮದ್‌ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್, ಜಿಯಾ-ಉರ್- ರಹಮಾನ್ ಅಲಿಯಾಸ್ ವಕಾಸ್, ಅಸಾದುಲ್ಲಾ ಅಖರ್ ಅಲಿಯಾಸ್ ಹಡ್ಡಿ, ತಹಸೀನ್ ಅಖರ್ ಅಲಿ ಯಾಸ್ ಮೋನು ಮತ್ತು ಅಜಾರನ್ನು ದೋಷಿಗಳೆಂದು ಪರಿಗಣಿಸಿ ಮರಣದಂಡನೆ ವಿಧಿಸಿತ್ತು. ಬಳಿಕ ಐವರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಎನ್‌ಐಎ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

ಈ ಕೃತ್ಯದ ಮುಖ್ಯ ರೂವಾರಿ ರಿಯಾಜ್ ಭಟ್ಕಳ್ ಈಗಲೂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.

 

Related Articles

error: Content is protected !!