ಕೋಟೇಶ್ವರ : ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ದಿಯೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನದ ಮತ್ತು ತಂತ್ರಜ್ಞಾನದ ಅರಿವಿಗೆ ಹಾಗೂ ಜಗತ್ತಿನ ವಿನೂತನ ಆವಿಷ್ಕಾರದ ಚಿಂತನೆಗೆ ಅಟಲ್ ಟಿಂಕರಿಂಗ್ ಲ್ಯಾಬ್ ಸಹಕಾರಿ ಯಾಗಲಿದೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ನಡೆದ ಉಡುಪಿ ಜಿಲ್ಲಾ ಅಟಲ್ ಟಿಂಕರಿಂಗ್ ಲ್ಯಾಬ್ ನ ಸುಮಾರು 50 ಶಾಲೆಗಳ ಶಿಕ್ಷಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಡಯಟ್ ನ ಉಪ ಪ್ರಾಂಶುಪಾಲರಾದ ಡಾ ಅಶೋಕ್ ಕಾಮತ್ ಅಭಿಪ್ರಾಯ ಪಟ್ಟರು ವಾಸುದೇವ್ ಆಚಾರ್ಯ ಕೋ ಆರ್ಡಿನೇಟರ್ ಐಟಿ ವಿಂಗ್ ಇಂಜಿನಿಯರಿಂಗ್ ಕಾಲೇಜ್ ನಿಟ್ಟೆ ಇವರು ಕಾರ್ಯಾಗಾರವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು
ಸಭೆಯಲ್ಲಿ ಶ್ರೀಮತಿ ಶೋಭಾ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಂದಾಪುರ ಪ್ರಭಾಕರ್ ಮಿತ್ಯಂತಾಯ ಹಿರಿಯ ಉಪನ್ಯಾಸಕರು ಡಯಟ್ ಉಡುಪಿ ಸುಶೀಲಾ ಹೊಳ್ಳ ಪ್ರಾಂಶುಪಾಲರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಸುಬ್ರಹ್ಮಣ್ಯ ಭಟ್ ಎ ಟಿ ಎಲ್ ನೋಡಲ್ ಅಧಿಕಾರಿ ಡಯಟ್ ಉಡುಪಿ ಚಂದ್ರಶೇಖರ್ ಶೆಟ್ಟಿ ಉಪ ಪ್ರಾಂಶುಪಾಲರು ಕೆಪಿಎಸ್ ಕೋಟೇಶ್ವರ
ಗಣೇಶ್ ಕೃಷ್ಣ ಭಾಗವತ್ ಉಪನ್ಯಾಸಕರು ಡಯಟ್ ಉಡುಪಿ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಶಿಕ್ಷಕ ಶ್ರೀಕಾಂತ್ ನೆರವೇರಿಸಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಪ್ರಭಾಕರ ಮಿತ್ಯಂತಾಯ ವಂದಿಸಿದರು ಸಂಸ್ಥೆಯ ನೋಡಲ್ ಶಿಕ್ಷಕಿ ಜಯಶ್ರೀ ಭಟ್ ಸಹಕರಿಸಿದರು