ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ನೇಚರ್ ಕ್ಲಬ್ ಆಶ್ರಯದಲ್ಲಿ ಜಲಚರ ಜೀವಿಗಳು ಮತ್ತು ಅವುಗಳ ಸಂರಕ್ಷಣೆಯ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ತಮಿಳುನಾಡು ಅಣ್ಣಾಮಲೈ ವಿಶ್ವವಿದ್ಯಾನಿಲಯದ ಸೌರವ್ ಚಟ್ಟೋಪಾಧ್ಯಾಯ ರವರು ಆಗಮಿಸಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ವಿವಿಧ ಬಗೆಯ ಮೀನುಗಳು ಮತ್ತು ಅವುಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಹಾಗೆಯೇ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಟರಿಣಾಮಗಳ ಕುರಿತು ಸವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|. ಕೆ ಉಮೇಶ್ ಶೆಟ್ಟಿಯವರು ಸಮುದ್ರ ಜೀವಿಗಳ ಕುರಿತು ಮಾತನಾಡಿದರು. ನೇಚರ್ ಕ್ಲಬ್ ಘಟಕದ ಸಹಸಂಯೋಜಕರಾದ ಸತೀಶ್ ಕಾಂಚನ್‍ರವರು ಉಪಸ್ಥಿತರಿದ್ದರು, ನೇಚರ್ ಕ್ಲಬ್‍ನ ಇನ್ನೋರ್ವ ಸಂಯೋಜಕರಾದ ಶ್ವೇತಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.