ಕುಂದಾಪುರ : ನಮ್ಮ ದೇಶಕ್ಕೆ ಇಂದು ಅಗತ್ಯವಿರುವುದು ಬರಿಯ ವಿದ್ಯಾವಂತರಲ್ಲ, ಪ್ರಾಮಾಣಿಕರು, ಸತ್ಯವಂತರು, ಸಚ್ಚಾರಿತ್ರ‍್ಯವುಳ್ಳವರ ಅಗತ್ಯವಿದೆ. ಇದು ಶಿಕ್ಷಣದಿಂದ ಸಾಧ್ಯವಾದಾಗ ಮಾತ್ರ ಶಿಕ್ಷಣ ನಿಜವಾದ ಅರ್ಥವಂತಿಕೆಯಿಂದ ಇರಲು ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಬಸವ ಕುಮಾರ ಪಾಟೀಲ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಹಾಗೂ ಕುಂದಗನ್ನಡ ಸಂಘ ಆಯೋಜಿಸಿದ ‘ಅಕ್ಷರ-ಅಕ್ಕರೆಯ ಹೊನಲು’ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಪ್ರವೀಣಾ ಎಮ್. ಪೂಜಾರಿ ಅತಿಥಿಗಳನ್ನು ಪರಿಚಯಿಸಿ, ಶ್ರೀ ಸುಕುಮಾರ್ ಶೆಟ್ಟಿ ಕಮಲಶಿಲೆ ವಂದಿಸಿ, ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.