ಕುಂದಾಪುರ : ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ಐಟಿ ಅಸೋಸಿಯೇಷನ್ ವತಿಯಿಂದ ಫೆಬ್ರವರಿ 15ರಂದು ಬಿಸಿಎ ವಿದ್ಯಾರ್ಥಿಗಳಿಗೆ ಫುಲ್ ಸ್ಟ್ಯಾಕ್ ಡೆವಲಪ್ಮೆಂಟ್ ಎಂಬ ವಿಷಯದ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ವಹಿಸಿದ್ದರು.
ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಅಡ್ವೆಂಟ್ ಟೆಕ್ ಸೊಲ್ಯೂಷನ್ ಇಂಡಿಯಾದ ತಾಂತ್ರಿಕ ಸಲಹೆಗಾರರಾದ ಶ್ರೀ ವಾದಿರಾಜ್ ಭಟ್ ಕಾರ್ಯಾಗಾರದಲ್ಲಿ ತಂತ್ರಜ್ಞಾನ ತ್ವರಿತಗತಿಯಲ್ಲಿ ಬೆಳೆಯುತ್ತಿರುವುದರಿಂದ ನಾವು ಹೊಸತನ್ನು ಕಲಿಯಲು ಸದಾ ಸಿದ್ಧರಾಗಿರಬೇಕು ಎಂದು ತಿಳಿಸಿದರು. ಫುಲ್ ಸ್ಟ್ಯಾಕ್ ಡೆವಲಪ್ಮೆಂಟ್ ಹಾಗೂ ಪ್ರಾಯೋಗಿಕ ಜ್ಞಾನದ ಮಹತ್ವ ಕುರಿತು ಮಾತನಾಡಿ, ನಮ್ಮ ಭವಿಷ್ಯವನ್ನು ರೂಪಿಸಲು ತಾಂತ್ರಿಕ ನಿಪುಣತೆ ಮತ್ತು ನಿರಂತರ ಕಲಿಕೆ ಅನಿವಾರ್ಯ ಎಂದು ವಿವರಿಸಿದರು.
ವಿಭಾಗದ ಪ್ರಾಧ್ಯಾಪಕರುಗಳಾದ ಶ್ರೀಮತಿ ಪವಿತ್ರಾ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ವಿಜಯಶ್ರೀ ವಂದಿಸಿದರು ಮತ್ತು ಶ್ರೀ ಗಿರಿರಾಜ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

