Home » ವಿವಿಧ ಸಂಘಗಳ ಉದ್ಘಾಟನ
 

ವಿವಿಧ ಸಂಘಗಳ ಉದ್ಘಾಟನ

by Kundapur Xpress
Spread the love
ಕುಂದಾಪುರ :ಬಸ್ರೂರು  ಶ್ರೀ ಶಾರದಾ ಕಾಲೇಜಿನಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ವೀರ ರಾಜೇಂದ್ರ ಹೆಗ್ಡೆ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಆಗಮಿಸಿದ ಕನ್ನಡ ವಿಭಾಗದ ನಿವೃತ್ತ ಪಾಧ್ಯಾಪಕರಾದ ಡಾ. ರೇಖಾ ಬನ್ನಾಡಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕಾಲೇಜಿನ ಅನುಭವದ ವಾಸ್ತವವನ್ನು ಬಿಚ್ಚಿಡುತ್ತಾ ವಿದ್ಯಾರ್ಥಿಗಳು ಸಿಗುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುತ್ತಾ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಇಂತಹ ಸಂಘಟನೆಗಳಲ್ಲಿ ಸಾಕಷ್ಟು ಅವಕಾಶಗಳಿವೆ ಎನ್ನುತ್ತಾ,  ಇಂದಿನ ಯುವ ಜನಾಂಗ ಮೊಬೈಲ್‍ಗಳ ಉಪಯೋಗದಿಂದಾಗಿ ಏಕಾಗ್ರತೆಯ ಕೊರತೆ ಉಂಟಾಗಿ ಆಲೈಸುವ ಮನೋಭಾವ ಕ್ಷೀಣಿಸುತ್ತಿದೆ ಆದ್ದರಿಂದ ವಿದ್ಯಾರ್ಥಿಗಳು ಕಾಲೇಜಿನ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂÀಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪುರುಷೋತ್ತಮ ಬಲ್ಯಾಯ ಕಾರ್ಯಕ್ರಮದಲ್ಲಿ ಆಶಯದ ಮಾತನಾಡುತ್ತಾ, ವಿದ್ಯಾರ್ಥಿಗಳು ಸಮುದಾಯದ ಜನರೊಂದಿಗೆ ಬೆರೆತು , ಅವರ ನೋವು ನಲಿವು ಸುಖ ದುಃಖ ಕಾರ್ಪಣ್ಯಗಳಲ್ಲಿ ಪಾಲ್ಗೊಂಡು ಕಲಿಕೆ ಜೊತೆಗೆ ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ನಿರ್ವಹಿಸಿದರು. ಕಾಲೇಜಿನ ವಿವಿಧ ಸಂಘದ ಸಂಯೋಜಕರಾದ ಸಂದೀಪ್ ಕೆ ಇವರು ಪ್ರಸ್ತಾವಿಕದೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಮನ ಪ್ರಾರ್ಥನೆಗೈದರು. ಕನ್ನಡ ಉಪನ್ಯಾಸಕಿ ಮಮತಾ  ಕಾರ್ಯಕ್ರಮ ನಿರೂಪಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ವೈಶಾಲಿ ಧನ್ಯವಾದಗೈದರು.
   

Related Articles

error: Content is protected !!