ಬಸ್ರೂರು : ಬಸ್ರೂರಿನ ಶಾರದಾ ಕಾಲೇಜಿನಲ್ಲಿ ಶಿಕ್ಷಕ- ರಕ್ಷಕ ಸಭೆ ವೀರರಾಜೇಂದ್ರ ಹೆಗ್ಡೆ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾಣಿಜ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪುರುಷೋತ್ತಮ ಬಲ್ಯಾಯರವರು ಆಗಮಿಸಿದ್ದರು ಪಾಲಕರನ್ನುದ್ದೇಶಿಸಿ ಮಾತನಾಡಿದ ಅವರು ಕಾಲೇಜು ನಡೆಸುವ ಶಿಕ್ಷಣದ ಕೆಲಸದ ಯಶಸ್ಸಿಗೆ ಪೋಷಕರ ಬೆಂಬಲ ಎಲ್ಲಾ ಸಂದರ್ಭಗಳಲ್ಲಿ ಅನಿವಾರ್ಯವಾದ್ದರಿಂದ ಮಕ್ಕಳ ಸೃಜನಶೀಲತೆ ಬೆಳವಣಿಗೆ ಮತ್ತು ಪಾಲನೆಗೆ ಪೋಷಕರ ಸಕರಾತ್ಮಕ ಸಹಕಾರ ಅತೀ ಅಗತ್ಯ ಎನ್ನುತ್ತಾ ಮಕ್ಕಳಲ ಅಧ್ಯಯನದಲ್ಲಿನ ಶೃದ್ಧೆ ಮತ್ತು ಅವರ ನಡವಳಿಕೆಯ ಬಗ್ಗೆ ಗಮನಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಮಾತನಾಡಿ ಹೆತ್ತವರು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಖಚಿತಪಡಿಸಿಕೊಂಡು ಶಿಕ್ಷಣದ ವಿಷಯಗಳಿಗೆ ಸಂಬಂಧಿಸಿದಂತೆ ಕಾಲೇಜಿಗೆ ಬಂದು ಮಾತುಕತೆ ನಡೆಸಬೇಕು ಆ ಮೂಲಕ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಶಿಕ್ಷಕ ರಕ್ಷಕ ಘಟಕದ ಸಂಯೋಜಕರಾದ ಡಾ. ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು