Home » ವಿ-ಗ್ರೋ ಬಿಸಿನೆಸ್ ಡೇ
 

ವಿ-ಗ್ರೋ ಬಿಸಿನೆಸ್ ಡೇ

by Kundapur Xpress
Spread the love

ಕುಂದಾಪುರ : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿರುವ “ವಿ-ಗ್ರೋ” ಬಿಸಿನೆಸ್ ಡೇ ಮೂರು ಹಂತಗಳಲ್ಲಿ ಆಯೋಜನೆಗೊಂಡು, ಮೊದಲನೇ ಹಂತದಲ್ಲಿ ವ್ಯವಹಾರ ಯೋಜನೆಯ ಪ್ರಸ್ತುತಿ, ಎರಡನೇ ಹಂತದಲ್ಲಿ ತಾವೇ ತಯಾರಿಸಿದ ಉತ್ಪನ್ನಗಳೊಂದಿಗೆ ಇತರ ಮಾರಾಟ ಹಾಗೂ ಮೂರನೇ ಹಂತದಲ್ಲಿ ಹಣಕಾಸಿನ ಆಯ ವ್ಯಯ ಪಟ್ಟಿಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ನಡೆಯಿತು

ಬಿ.ಕಾಂ. ಪದವೀಧರರಿಗೆ ನವ ಉದ್ಯಮಗಳನ್ನು ಕೈಗೊಳ್ಳಲು ವ್ಯವಹಾರ ಕೌಶಲ್ಯಗಳು ಅಗತ್ಯವಾಗಿವೆ ಎಂದು ಮುಖ್ಯ ಅತಿಥಿಗಳಾದ ಕುಂದಾಪುರದ ಪ್ರಸಿದ್ಧ ಉದ್ಯಮಿಗಳಾದ ರಂಜಿತ್ ಕುಮಾರ್ ಶೆಟ್ಟಿ ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಸರಕಾರಿ ಪ್ರಥಮ ದರ್ಜೆ ಕಾಲೇಜು, ತೀರ್ಥಹಳ್ಳಿ ಇದರ ಸಹಪ್ರಾಧ್ಯಾಪಕರಾದ ಸುಧಾಕರ್ ಕೆ.ಜಿ. ಅವರು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯಮಿಗಳಾಗಲು ಲೋಕಜ್ಞಾನದೊಂದಿಗೆ ವ್ಯವಹಾರ ಜ್ಞಾನವು ಅತ್ಯಗತ್ಯ ಎಂದು ತಿಳಿಸಿದರು.

ತೀರ್ಪುಗಾರರಾಗಿ ಕೋಟ ವಿವೇಕ ಪದವಿಪೂರ್ವ ಕಾಲೇಜು ಇದರ ವಾಣಿಜ್ಯ ಉಪನ್ಯಾಸಕರಾದ ಸಂಜೀವ ಗುಂಡ್ಮಿ, ಪ್ರಾಕ್ತನ ವಿದ್ಯಾರ್ಥಿಗಳಾದ CA. ಗಣೇಶ್ ಶೆಟ್ಟಿ ಹಾಗೂ CMA. ಕಿರಣ್ ಶೆಟ್ಟಿ ಅವರು ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಪ್ರೊ. ಕೆ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಡಾ. ಕೆ. ಚೇತನ್ ಶೆಟ್ಟಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ಭಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ರಕ್ಷಿತ್ ರಾವ್ ವಿಜೇತರ ಪಟ್ಟಿಯನ್ನು ವಾಚಿಸಿದರು. ವಾಣಿಜ್ಯ ಪ್ರಾಧ್ಯಾಪಕರಾದ ಸುಧೀರ್ ಕುಮಾರ್ ವಂದಿಸಿ, ದೀಪಾ ಪೂಜಾರಿ ನಿರೂಪಿಸಿದರು. ಪ್ರಥಮ ಸ್ಥಾನವನ್ನು ತೃತೀಯ ಬಿಕಾಂ (ಸಿ’), ದ್ವಿತೀಯ ಸ್ಥಾನವನ್ನು ದ್ವಿತೀಯ ಬಿಕಾಂ (‘ಬಿ’) ಗಳಿಸಿ ವಿಜೇತರಾಗಿದ್ದಾರೆ.

   

Related Articles

error: Content is protected !!