ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2022-23ನೇ ಸಾಲಿನ ಪ್ರತಿಭಾ ಪ್ರದರ್ಶನ “ಸಂಭ್ರಮ”ವು ಕುಂದಾಪುರದ ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಸಂಪನ್ನಗೊಂಡಿತು.
ಕಾಲೇಜಿನ ಅಂತರ್ ತರಗತಿ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ16 ತಂಡಗಳು ಭಾಗವಹಿಸಿದ್ದವು. ಬಹಳ ವೈಶಿಷ್ಟ್ಯಪೂರ್ಣವಾಗಿ ಕಾರ್ಯಕ್ರಮವು ಮೂಡಿ ಬಂದಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಆಗಮಿಸಿದ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಉದಯ್ ಕುಮಾರ್ ಶೆಟ್ಟಿ, ಜನತಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಉದಯ ನಾಯ್ಕ್ ಹಾಗೂ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಾಗರತ್ನ ಹೇರ್ಳೆ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಶಂಶಿಸಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭಹಾರೈಸಿದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮದ ಸಂಯೋಜಕರಾದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಹಿಂದಿ ಪ್ರಾಧ್ಯಾಪಕರಾದ ಶ್ರೀಮತಿ ರೇವತಿ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಂತಿಮ ಬಿ.ಕಾಂ. ‘ಸಿ’ ವಿಭಾಗ, ದ್ವಿತೀಯ ಸ್ಥಾನವನ್ನು ಅಂತಿಮ ಬಿ.ಕಾಂ. ‘ಬಿ’ ವಿಭಾಗ, ತೃತೀಯ ಸ್ಥಾನವನ್ನು ಬಿಬಿಎ ವಿಭಾಗ ಪಡೆಯಿತು. ಉತ್ತಮ ಸಮೂಹ ಪ್ರದರ್ಶನ ಪ್ರಶಸ್ತಿಯನ್ನು ಪ್ರಥಮ ಬಿ.ಕಾಂ. ‘ಎ’ ವಿಭಾಗ ಹಾಗೂ ಉತ್ತಮ ನಿರೂಪಕ ಪ್ರಶಸ್ತಿಯನ್ನು ದ್ವಿತೀಯ ಬಿ.ಕಾಂ. ‘ಬಿ’ ವಿಭಾಗದ ಪ್ರಿಯಾಂಕಾ, ಉತ್ತಮ ವೈಯಕ್ತಿಕ ಪ್ರತಿಭೆ ದ್ವಿತೀಯ ಬಿ.ಕಾಂ. ‘ಎ’ ವಿಭಾಗದ ಸ್ವಾತಿ ಪಡೆದುಕೊಂಡರು.