ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ರ‍್ಜೆ ಕಾಲೇಜಿನ ಗಣಕವಿಜ್ಞಾನ ವಿಭಾಗದ ಅಂತಿಮ ವಿದ್ಯರ‍್ಥಿಗಳಿಂದ ವಿಸ್ತರಣಾ ಚಟುವಟಿಕೆಯ ಕಾರ‍್ಯಕ್ರಮವನ್ನು ಜೂನ್ ೨೧ ರಂದು ನಿವೇದಿತಾ ಪ್ರೌಢಶಾಲೆ ಬಸ್ರೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಂತಿಮ ಬಿಸಿಎ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯರ‍್ಥಿಗಳಿಗೆ ಗಣಕಯಂತ್ರ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಂಪ್ಯೂಟರ್ ಹೇಗೆ ತನ್ನ ಕಾರ್ಯ ನಿರ್ವಹಿಸುತ್ತದೆ ಮತ್ತು ಕಂಪ್ಯೂರ‍್ನ ಅಗತ್ಯತೆ ಮತ್ತು ದುಷ್ಪರಿಣಾಮದ ಬಗ್ಗೆ ತಿಳಿಸಿಕೊಡುವುದರ ಜೊತೆ ಜೊತೆಗೆ ಆ ಎಲ್ಲಾ ಮಾಹಿತಿಗೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಈ ಸಂರ‍್ಭ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸುಬ್ಬಣ್ಣ ಕೋಣಿ ಮತ್ತು ಶಿಕ್ಷಕರು ಹಾಗೂ ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ ಇದರ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ಹರೀಶ್ ಕಾಂಚನ್, ಶ್ರೀಮತಿ ಪವಿತ್ರ ಮತ್ತು ವಿನುತಾ ಉಪಸ್ಥಿತರಿದ್ದರು.