Home » ‘ಕುಂದಗನ್ನಡ ನೆಲಪರ ಆಚರಣೆ ಮತ್ತು ಸಂಸ್ಕೃತಿ’
 

‘ಕುಂದಗನ್ನಡ ನೆಲಪರ ಆಚರಣೆ ಮತ್ತು ಸಂಸ್ಕೃತಿ’

by Kundapur Xpress
Spread the love

ವಿಶೇಷ ಉಪನ್ಯಾಸ – ‘ಕುಂದಗನ್ನಡ ನೆಲಪರ ಆಚರಣೆ ಮತ್ತು ಸಂಸ್ಕೃತಿ’

ಕುಂದಾಪುರ: ಕುಂದಾಪುರ ಭಾಷಿಕ ಮತ್ತು ಸಾಂಸ್ಕೃತಿಕವಾಗಿ ಅನನ್ಯವಾದ ಪ್ರದೇಶ. ಕೃಷಿ ಪ್ರಧಾನವಾದ ಈ ಭಾಗದಲ್ಲಿ ಕೃಷಿಯೊಂದಿಗೆ ಅನೇಕ ನೆಲಪರವಾದ ಆಚರಣೆಗಳು ಹೆಣೆದುಕೊಂಡಿದೆ’. ಆಚರಣೆಗಳು ಮರೆಯಾದಂತೆ ಭಾಷೆ, ಸಂಸ್ಕೃತಿ ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪ್ರಾದೇಶಿಕ ಆಚರಣೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ತುರ್ತು ಎಂದು ಸಿದ್ದಾಪುರದ ವೈದ್ಯರಾದ ಡಾ| ಜಗದೀಶ್ ಶೆಟ್ಟಿ ಹೇಳಿದರು.
ಅವರು ದಿನಾಂಕ ಜುಲೈ 04ರಂದು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕುಂದಗನ್ನಡ ನೆಲಪರ ಆಚರಣೆ ಮತ್ತು ಸಂಸ್ಕೃತಿ’ ಎಂಬ ವಿಷಯದ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಕುಂದಗನ್ನಡ ಸಂಘದ ಸಂಯೋಜಕ ಶ್ರೀ ಸುಕುಮಾರ್ ಶೆಟ್ಟಿ ಕಮಲಶಿಲೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಾದ ಚೇತನ್ ಮತ್ತು ಶ್ರೀನಿಧಿ ಉಪಸ್ಥಿತರಿದ್ದರು.
ಕುಂದಗನ್ನಡ ಸಂಘದ ಸಹ ಸಂಯೋಜಕಿ ವಿನಯ ವಿ. ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಪವಿತ್ರ ಪೈ, ಮದನ್ ಪ್ರಾರ್ಥಿಸಿ, ನಿಖಿತಾ ಕಾರ್ಯಕ್ರಮ ನಿರೂಪಿಸಿದರು.

   

Related Articles

error: Content is protected !!