ಕುಂದಾಪುರ : ಮಕ್ಕಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಿಂದ ಜಾರಿಗೆ ಬಂದ ಕಾಯಿದೆ ಪೋಕ್ಸೋ. ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆಯ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ದೃಢವಾದ ಕಾನೂನು ಚೌಕಟ್ಟನ್ನು ಒದಗಿಸಲು ಈ ಕಾಯಿದೆಯನ್ನು ಜಾರಿಗೆ ತರಲಾಯಿತು. ಹಾಗೆಯೇ ಈ ಕಾಯಿದೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಾಗಿರುವುದು ವರ್ತಮಾನದ ತುರ್ತು ಎಂದು ಹಟ್ಟಿಯಂಗಡಿ ನಮ್ಮ ಭೂಮಿ ಸಂಸ್ಥೆಯ ಸಿ.ಡಬ್ಲೂö್ಯ.ಸಿ. ಸಂಯೋಜಕ ಶ್ರೀ ಶ್ರೀನಿವಾಸ ಗಾಣಿಗ ಹೇಳಿದರು.
ಅವರು ಕಾಲೇಜಿನ ರಾಷ್ಟಿಯ ಸೇವಾ ಯೋಜನಾ ಘಟಕದ ಎನ್.ಎಸ್.ಎಸ್. ಸ್ವಯಂಸೇವಕರಿಗೆ ಹಮ್ಮಿಕೊಂಡ ಪೋಕ್ಸೋ ಕುರಿತ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಮಕ್ಕಳ ಹಕ್ಕುಗಳ ಕುರಿತು ನಮ್ಮ ಭೂಮಿ ಸಂಸ್ಥೆಯ ಸಿ.ಡಬ್ಲೂö್ಯ.ಸಿ.ಯ ಪಂಚಾಯತ್ ಮಟ್ಟದ ಸಂಯೋಜಕ ಶ್ರೀ ಗಣೇಶ್ ಶಾನ್ಕಟ್ ಮಾಹಿತಿ ನೀಡಿದರು. ಸಿ.ಡಬ್ಲೂö್ಯ.ಸಿ.ಯ ಪಂಚಾಯತ್ ಮಟ್ಟದ ಸಂಯೋಜಕರಾದ ಅನಿತಾ, ಆಶಾ ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾಂಶುಪಾಲ ಮತ್ತು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಎನ್.ಎಸ್.ಎಸ್. ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಸ್ವಾಗತಿಸಿದರು.
ಎನ್.ಎಸ್.ಎಸ್. ಸ್ವಯಂಸೇವಕರಾದ ಸಹನಾ ಶೆಟ್ಟಿ ವಂದಿಸಿ, ವೈಷ್ಣವಿ ಎಮ್.ಎಸ್. ಕಾರ್ಯಕ್ರಮ ನಿರೂಪಿಸಿದರು.