ಕುಂದಾಪುರ : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಳಹಳ್ಳಿಯಲ್ಲಿ ನಡೆಯುತ್ತಿರುವ ಪ್ರಸಕ್ತ ಶೈಕ್ಷಣಿಕ ವರ್ಷದ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಹಾಗಣಪತಿ ಗೆಳೆಯರ ಬಳಗ, ಮೊಳಹಳ್ಳಿ, ಶ್ರೀಮಾತಾ ಫ್ರೆಂಡ್ಸ್, ಕೈಲ್ಕೇರಿ, ಶ್ರೀ ಶಿವರಾಮ ಸ್ಪೋರ್ಟ್ಸ್ ಕ್ಲಬ್, ಮೊಳಹಳ್ಳಿ, ಹಾÊಗುಳಿ ಫ್ರೆಂಡ್ಸ್, ಬೆಳಗೋಡು ಇವರ ಸಹಯೋಗದೊಂದಿಗೆ ‘ಕೆಸರಲ್ಲೊಂದಿನ’ಎನ್ನುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಕೆಸರು ಗದ್ದೆಯಲ್ಲಿ ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಬೆನ್ನುಮೂಟೆ, ಹಾಳೆ ಬಂಡಿ ಇತ್ಯಾದಿ ವೈವಿಧ್ಯಮಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಯಿತು.
ಕೆಸರು ಗದ್ದೆಯಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳನ್ನು ಸೀತಾರಾಮ ಹೆಗ್ಡೆ ಹೆಸಿನಕಟ್ಟೆ, ಮೊಳಹಳ್ಳಿ ಇವರು ಉದ್ಘಾಟಿಸಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೈಲ್ಕೇರಿ ಇಲ್ಲಿನ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ಶುಭಹಾರೈಸಿದರು. ಈ ಸಂದರ್ಭ ಎಚ್. ಜಯಶೀಲ ಶೆಟ್ಟಿ, ನಿವೃತ್ತ ಜಂಟಿ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಕನಾಟಕ ಸರಕಾರ, ರವಿರಾಜ್ ಶೆಟ್ಟಿ ಕಂಬಳಗದ್ದೆ ಮನೆ, ಮೊಳಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ, ಕೈಲ್ಕೇರಿಯ ಸುಲೇಖಾ ಎಸ್. ಶೆಟ್ಟಿ, ರಂಜಿತ್ ಭಂಡಾರಿ, ಶಿವರಾಯ ಸ್ಪೋರ್ಟ್ಸ್ ಕ್ಲಬ್, ಮೊಳಹಳ್ಳಿ ಹಾಗೂ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಶಿಬಿರಾಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು.