Home » ಸಿ.ಎಸ್.ಇ.ಇ.ಟಿ. ಮತ್ತು ಸಿ.ಎಂ.ಎ. ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದ
 

ಸಿ.ಎಸ್.ಇ.ಇ.ಟಿ. ಮತ್ತು ಸಿ.ಎಂ.ಎ. ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದ

by Kundapur Xpress
Spread the love

ಕುಂದಾಪುರ:ಶ್ರೇಯಾ ಪೂಜಾ ಶೆಟ್ಟಿ ಆಯುಶ್ ಪೃಥ್ವೀಶ್ ಹೆಬ್ಬಾರ್ ನಿಖಿತಾ ಆರ್. ಪೂಜಾರಿ ಯಶವಂತ
ಕುAದಾಪುರ (ಸೆ.1): ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸುವ ಸಿ.ಎಸ್. ಎಕ್ಸಿಕ್ಯೂಟಿವ್ ಗ್ರೂಪ್-I, ಗ್ರೂಪ್-II ಮತ್ತು ಸಿ.ಎಂ.ಎ. ಇಂಟರ್‌ಮೀಡಿಯೆಟ್ ಗ್ರೂಪ್-I ಜೂನ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ.


ಶ್ರೇಯಾ, ಪೂಜಾ ಶೆಟ್ಟಿ, ಆಯುಶ್, ಪೃಥ್ವೀಶ್ ಹೆಬ್ಬಾರ್ ಸಿ.ಎಸ್. ಎಕ್ಸಿಕ್ಯೂಟಿವ್ ಗ್ರೂಪ್-I ರಲ್ಲಿ, ನಿಖಿತಾ ಆರ್. ಪೂಜಾರಿ ಗ್ರೂಪ್-II ರಲ್ಲಿ ಹಾಗೂ ಯಶವಂತ ಸಿ.ಎಂ.ಎ. ಇಂಟರ್‌ಮೀಡಿಯೆಟ್ ಗ್ರೂಪ್-I ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವೀ-ರೀಚ್ ಸಂಸ್ಥೆಯ ಪಠ್ಯ ಪ್ರವಚನ, ಮಧ್ಯಂತರ ಮಾದರಿ ಪರೀಕ್ಷೆ ಹಾಗೂ ನುರಿತ ತರಬೇತುದಾರರಿಂದ ತರಬೇತಿ, ಸಲಹೆ ಮತ್ತು ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಈ ಸಾಧನೆಗೈದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ

 

Related Articles

error: Content is protected !!