Home » ಸರಸ್ವತಿ ಹಾಗೂ ಶಾರದಾ ಪೂಜೆ
 

ಸರಸ್ವತಿ ಹಾಗೂ ಶಾರದಾ ಪೂಜೆ

by Kundapur Xpress
Spread the love

ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಗಣದಲ್ಲಿರುವ ಸರಸ್ವತಿ ದೇವರ ಮೂರ್ತಿಗೆ ನವರಾತ್ರಿಯ ಸಂದರ್ಭ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಂಥಾಲಯದಲ್ಲಿ ಶಾರದಾ ಪೂಜೆ ಕಾರ್ಯಕ್ರಮವನ್ನು ಭಜನಾ ಕೀರ್ತನೆಯ ಮೂಲಕ ಆಚರಿಸಲಾಯಿತು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀ ಗಿರಿರಾಜ್ ಭಟ್ ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಮುಖ್ಯ ಗ್ರಂಥಪಾಲಕ ಶ್ರೀ ಮಹೇಶ್ ನಾಯ್ಕ್, ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Related Articles

error: Content is protected !!