ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರಾಷ್ಟಿçÃಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಳಹಳ್ಳಿಯಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹೆಚ್. ಜಯಶೀಲ್ ಶೆಟ್ಟಿ ಸಮಾರೋಪ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಥಮ ದರ್ಜೆ ಗುತ್ತಿಗೆದಾರರಾದ ಮಹೇಶ್ ಹೆಗ್ಡೆ ಮೊಳಹಳ್ಳಿ, ದಿನೇಶ್ ಹೆಗ್ಡೆ ಮೊಳಹಳ್ಳಿ ಶುಭಹಾರೈಸಿದರು. ಮಂಗಳೂರಿನ ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ದಿಕ್ಸೂಚಿ ಭಾಷಣ ಮಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರ ವಿಜಯಾನಂದ ಶೆಟ್ಟಿ ಹಳ್ನಾಡು ಆಶಯ ನುಡಿಗಳನ್ನಾಡಿದರು.
ಈ ಸಂದರ್ಭ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ದ್ಯಾವಲಬೆಟ್ಟು, ಉಪನ್ಯಾಸಕ ಶಾಂತಾರಾಮ ಶೆಟ್ಟಿ ಮರಾತೂರು, ಉದ್ಯಮಿ ನಾಗರಾಜ ಶೆಟ್ಟಿ ಮಕ್ಕಿತೋಟ ಮನೆ, ನೀಲಾವರ, ಕುಂದಾಪುರ ತಾಲೂಕು ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ವಾಣಿ ಆರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಮನೋಜ್ ಕುಮಾರ್ ಶೆಟ್ಟಿ ಹಾಗೂ ಜಯಂತಿ ಎಮ್. ಶೆಟ್ಟಿ, ಪ್ರತಾಪ್ ಹೆಗ್ಡೆ ಕೈಲ್ಕೇರಿ, ಮಧುಕರ್ ಮಣಿಯಾಡಿ, ಉದಯ್ ಕುಮಾರ ಶೆಟ್ಟಿ ಕೊಂಗೇರಿ, ಉದಯ್ ಕುಮಾರ ಶೆಟ್ಟಿ ಮಾಸ್ತಿಕಟ್ಟೆ, ಶಾಲಾ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಜಯಶ್ರೀ, ಮುಖ್ಯೋಪಾಧ್ಯಾಯ ಗೋವಿಂದ ಎಸ್., ಎನ್ನೆಸ್ಸೆಸ್ ಸ್ವಯಂಸೇವಕ ಪ್ರತಿನಿಧಿಗಳಾದ ನಶ್ಯಂತ್, ವೈಷ್ಣವಿ ಎಮ್.ಎಸ್. ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಹಾಗೂ ಉಪಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕ ಗಣೆಶ್ ಶೆಟ್ಟಿ ಮೊಳಹಳ್ಳಿ, ಶಿಬಿರಾರ್ಥಿಗಳಾದ ಶೃದ್ಧಾ ಆರ್, ಲಕ್ಷಿö್ಮಕಾಂತ್, ಶ್ರೀನಾಭ ಉಪಾಧ್ಯಾಯ ಅನಿಸಿಕೆ ಹಂಚಿಕೊAಡರು.
ಶಿಬಿರಾಧಿಕಾರಿ ದೀಪಾ ಪೂಜಾರಿ ವಂದಿಸಿ, ಕನ್ನಡ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಾದ ಪೂಜಾ ಆಚಾರ್, ಶ್ರೇಯಾ ಖಾರ್ವಿ ಪ್ರಾರ್ಥಿಸಿದರು.