Home » ಬಿ.ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
 

ಬಿ.ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ

by Kundapur Xpress
Spread the love

ಕುಂದಾಪುರ : ನಮ್ಮ ಆಲೋಚನೆಗಳು ಶುದ್ಧವಾಗಿದ್ದಲ್ಲಿ ಸಂಸ್ಕಾರವು ಉತ್ತಮವಾಗಿರುತ್ತದೆ. ಮಾಡುವ ಕಾರ್ಯದಲ್ಲಿ ನಿಷ್ಠೆ, ಪರಿಶ್ರಮಗಳು ಇದ್ದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಸಂಸ್ಕಾರಯುತ ಚಾರಿತ್ರ್ಯ ಅತ್ಯುನ್ನತ ಪ್ರತೀಕ ಎಂದು ಕುಂದಾಪುರದ ಸ್ಪರ್ಧಾ ಸಾರಥಿ ಕೆ.ಎ.ಎಸ್. ಅಕಾಡೆಮಿ ಕುಂದಾಪುರದ ನಿರ್ದೇಶಕರಾದ ಆದರ್ಶ ಕೆಲ ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಿರಿ ಸ್ವಾಗತಿಸಿ, ದಿವಿಜ ಅತಿಥಿಗಳನ್ನು ಪರಿಚಯಿಸಿ, ಪ್ರತೀಕ್ಷಾ ವಂದಿಸಿ, ಪ್ರಥಾ ಆರ್. ಶೆಟ್ಟಿ ನಿರೂಪಿಸಿದರು.

 

Related Articles

error: Content is protected !!