Home » ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ “ಸಂಭ್ರಮ” ಸಂಪನ್ನ
 

ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ “ಸಂಭ್ರಮ” ಸಂಪನ್ನ

by Kundapur Xpress
Spread the love

ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಬಿ.ಎಂ.ಎಸ್. ಕ್ರೀಡಾಂಗಣದ ತೆರೆದ ವೇದಿಕೆಯಲ್ಲಿ ನಡೆದ ಪ್ರತಿಭಾ ಪ್ರದರ್ಶನ “ಸಂಭ್ರಮ”ದ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಾದ ಶ್ರೀ ವೆಂಕಟರಮಣ ಪದವಿ-ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀ ನಾಗೇಂದ್ರ ಕುಮಾರ್ ಬಂಕೇಶ್ವರ, ಸುಜ್ಞಾನ ಪದವಿ-ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀ ಪ್ರಮಥ್ ಶೆಟ್ಟಿ ಹಾಗೂ ಬೈಂದೂರು ಸರಕಾರಿ ಪದವಿ-ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಶಶಿಕಲಾ ಅನಿಸಿಕೆ ಹಂಚಿಕೊAಡರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮ ಸಂಯೋಜಕರಾದ ಆಡಳಿತ ನಿಕಾಯಕ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ದೀಪಿಕಾ ಜಿ. ಉಪಸ್ಥಿತರಿದ್ದರು.
ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಹರೀಶ್ ಕಾಂಚನ್ ಬಹುಮಾನಿತರ ಪಟ್ಟಿ ವಾಚಿಸಿದರು. ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸ್ವಾತಿ ಜಿ. ರಾವ್ ನಿರೂಪಿಸಿ, ವಂದಿಸಿದರು. ಈ ಸಂದರ್ಭ ಬಹುಮಾನ ವಿತರಣೆ ನಡೆಸಲಾಯಿತು.
ಅತ್ಯುತ್ತಮ ಕಾರ್ಯಕ್ರಮ ನಿರೂಪಣೆ ಪ್ರಶಸ್ತಿಯನ್ನು ರಶ್ಮಿತಾ ಶೆಟ್ಟಿ ಪ್ರಥಮ ಬಿಸಿಎ (ಎ), ವೈಯಕ್ತಿಕ ಪ್ರತಿಭೆ ಪ್ರಶಸ್ತಿಯನ್ನು ಶರಣ್ಯ ಶೆಟ್ಟಿ ದ್ವಿತೀಯ ಬಿ.ಕಾಂ. (ಬಿ) ಪಡೆದರು. ಅತ್ಯುತ್ತಮ ಗುಂಪು ನೃತ್ಯ ಬಹುಮಾನ ಪ್ರಥಮ ಬಿ.ಕಾಂ. (ಬಿ), ತೃತೀಯ ಬಿ.ಕಾಂ. (ಎ) ಸಮಗ್ರ ಪುರಸ್ಕಾರವನ್ನು, ತೃತೀಯ ಬಿ.ಬಿ.ಎ. ರನ್ನರ್-ಅಪ್ ಪ್ರಶಸ್ತಿಯನ್ನು ಹಾಗೂ ದ್ವಿತೀಯ ಬಿ.ಬಿ.ಎ. ದ್ವಿತೀಯ ರನ್ನರ್-ಅಪ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು.

 

Related Articles

error: Content is protected !!