ಕುಂದಾಪುರ : ಜಾಗತೀಕರಣದ ಕಾಲಘಟ್ಟದಲ್ಲಿ ಇಂಗ್ಲೀಷ್ ಭಾಷೆ ಅತೀ ಮುಖ್ಯವಾಗಿದ್ದು, ಭಾಷಾ ಕೌಶಲ್ಯಗಳು ಸಂವಹನದ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾಷೆಯ ಬಳಕೆಯಿಂದ ಪ್ರಭುದ್ಧತೆ ಪಡೆದುಕೊಳ್ಳುತ್ತದೆ. ವಿಲಿಯಂ ಶೇಕ್ಸ್‍ಫಿಯರ್‍ನ ಜನನ ದಿನ ಹಾಗೂ ಮರಣ ದಿನವಾದ ಏಪ್ರಿಲ್ 23ರಂದು ಆಚರಿಸುವ ಈ ಇಂಗ್ಲೀಷ್ ದಿನಾಚರಣೆ ಆಂಗ್ಲ ಕವಿಯೊಬ್ಬರನ್ನು ಪರಿಚಯಿಸುವುದರೊಂದಿಗೆ ಇಂಗ್ಲೀಷ್ ಭಾಷೆಯ ಬಗೆಗೆ ವಿದ್ಯಾರ್ಥಿಗಳಿಗೆ ಆತ್ಮೀಯತೆ ಬೆಳೆಯುತ್ತದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು, ನೆಂಪು ಇಲ್ಲಿನ ಪ್ರಾಂಶುಪಾಲರಾದ ಶ್ರೀ ರಾಜೀವ್ ನಾಯಕ್ ಹೇಳಿದರು.
ಅವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗ ಹಾಗೂ ಇಂಗ್ಲೀಷ್ ಸಂಘದ ಆಶ್ರಯದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಇಂಗ್ಲೀಷ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಬದುಕಿನಲ್ಲಿ ಆಂಗ್ಲ ಭಾಷಾ ಬಳಕೆಯ ಅನಿವಾರ್ಯತೆಯನ್ನು ತಿಳಿಸಿದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿ, ಉಪನ್ಯಾಸಕಿ ಮೋನಿಕಾ ಡಿ’ಸೋಜಾ ವಂದಿಸಿದರು. ವಿದ್ಯಾರ್ಥಿಗಳಾದ ಉತ್ಸವ್ ವಿಲಿಯಂ ಶೇಕ್ಸ್‍ಫಿಯರ್ ಕುರಿತು ಮಾಹಿತಿ ನೀಡಿದರು. ಯಶವಂತ್ ಅತಿಥಿಗಳನ್ನು ಪರಿಚಯಿಸಿ, ನಯನಾ ನಿರೂಪಿಸಿದರು.