Home » ರಾಷ್ಟ್ರೀಯ ಸೇವಾ ಯೋಜನೆ
 

ರಾಷ್ಟ್ರೀಯ ಸೇವಾ ಯೋಜನೆ

by Kundapur Xpress
Spread the love

ಕುಂದಾಪುರ:ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಇದರ 2023-24ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು  ನೆರವೇರಿತು. ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಗಿದ್ದ ಪ್ರೊ ಜಿ. ಎಸ್. ಹೆಗಡೆ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಏನ್.ಎಸ್. ಎಸ್ ನ ಧ್ಯೇಯ್ಯೋದ್ದೇಶಗಳು, ಅದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿ ಶುಭ ಹಾರೈಸಿದರು.

ಪ್ರಾಂಶುಪಾಲರಾದ ಡಾ. ಶುಭಕಾರಾಚಾರಿ ಇವರು ಏನ್.ಎಸ್. ಎಸ್ ನ ಮಹತ್ವ ಮತ್ತು ಅಗತ್ಯತೆ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ವಿಜಯ ಕುಮಾರ್ ಕೆ. ಎಂ., ಐಕ್ಯೂಎಸಿ ಸಂಯೋಜಕರು,ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ರಾಮಚಂದ್ರ ಆಚಾರ್ ಹಾಗೂ ಉಪನ್ಯಾಸಕವೃಂದದವರು ಉಪಸ್ಥಿತರಿದ್ದರು.ಸ್ವಯಂಸೇವಕರಾದ ಕುಮಾರಿ ಶ್ರದ್ಧಾ ಸ್ವಾಗತಿಸಿದರು, ಕುಮಾರಿ ಸುಧೀಕ್ಷಾ ಅತಿಥಿಗಳನ್ನು ಪರಿಚಯಿಸಿದರು,ಕುಮಾರಿ ಕವನಾ ವಂದಿಸಿದರು ಹಾಗೂ ಕುಮಾರಿ ಶ್ರೀಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು

   

Related Articles

error: Content is protected !!