Home » ವಿದ್ಯೆ ಎಲ್ಲಾ ಸಂಪತ್ತಿಗಿಂತ  ಶ್ರೇಷ್ಠವಾದುದು
 

ವಿದ್ಯೆ ಎಲ್ಲಾ ಸಂಪತ್ತಿಗಿಂತ  ಶ್ರೇಷ್ಠವಾದುದು

ಎಸ್.ಎಸ್.ನಾಯಕ್

by Kundapur Xpress
Spread the love

ಕುಂದಾಪುರ: ವಿದ್ಯೆಯಿಂದ ಅಮೃತತ್ವವನ್ನು ಹೊಂದಬಹುದು ಎಂದು ಎಸ್.ಎಸ್.ನಾಯಕ್ ಮತ್ತು  ಅಸೋಸಿಯೇಟ್ಸ್  ಎಂಬ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ  ಹಿರಿಯ ಪಾಲುದಾರರಾದ ಎಸ್.ಎಸ್.ನಾಯಕ್ ಹೇಳಿದರು . ಅವರು ಮಾರ್ಚ್ 27ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು

ವಿದ್ಯಾ ಎಲ್ಲಾ ಸಂಪತ್ತಿಗಿಂತ  ಶ್ರೇಷ್ಠವಾದುದು. ಅದನ್ನು ಯಾರು ಕಳ್ಳತನ ಮಾಡಲಾಗುವುದಿಲ್ಲ. ಕಸಿಯಲು ಸಾಧ್ಯವಿಲ್ಲ. ದುಡ್ಡಿನಂತೆ ಖರ್ಚು ಮಾಡಲು ಆಗುವುದಿಲ್ಲ. ಅದನ್ನು ಹೊರಲು ಯಾವುದೇ ಭಾರಿ ವಾಹನಗಳು ಬೇಡ. ವಿದ್ಯೆ ಧನಕ್ಕಿಂತ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ವಿದ್ಯಾ ಸಂಪತ್ತನ್ನು ಪಡೆಯಬೇಕಾದರೆ ಇಚ್ಛಾಶಕ್ತಿ ಮತ್ತು ಪ್ರಯತ್ನ ಬೇಕು. ಜೊತೆಗೆ ಅತ್ಯುತ್ತಮ ದೃಷ್ಟಿಕೋನವನ್ನು ಇಟ್ಟುಕೊಳ್ಳಿ. ಅಲ್ಲದೇ ಸಾಧಿಸುವ ಇಚ್ಛೆ ಇದ್ದರೆ ಸಾಲದು ನಿಮ್ಮ ಗುರಿ ತಲುಪಬೇಕಾದರೆ ಪರಿಪೂರ್ಣವಾಗಿ ಕಾರ್ಯಪ್ರವೃತ್ತರಾಗಬೇಕು. ಎಲ್ಲವುದಕ್ಕಿಂತ ಮುಖ್ಯವಾಗಿ  ಪರೋಪಕಾರದ ಮನೋಭಾವ ಬೆಳೆಸಿಕೊಳ್ಳಬೇಕು. ಯಾಕೆಂದರೆ ನಮ್ಮ ಸಾಧನೆಯ ಹಾದಿಯಲ್ಲಿ  ನಮ್ಮ ತಂದೆ ತಾಯಿ ಕಲಿಸಿದ ಶಿಕ್ಷಣ ಸಂಸ್ಥೆ ಮತ್ತು ಜೀವನ ರೂಪಿಸಿದ ಸಮಾಜವನ್ನು ಮರೆಯಬಾರದು ಎಂದು ಕರೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ ಕಾಮತ್, ರಾಜೇಂದ್ರ ತೋಳಾರ್ ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸದಾನಂದ ಕಾಮತ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಉಪಸ್ಥಿತರಿದ್ದರು

ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.  ಚಿನ್ನದ ಪದಕ ಮತ್ತು ದತ್ತಿನಿಧಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಸ್ವಾಗತಿಸಿದರು. ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ.ಕೆ.ಗೋಪಾಲ್ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ಪ್ರಿಯಾ ರೇಗೊ ಕಾರ್ಯಕ್ರಮ ನಿರೂಪಿಸಿದರು

   

Related Articles

error: Content is protected !!