Home » ಜಗತ್ತು ವಿಶೇಷ ಪ್ರತಿಭೆಗಳನ್ನು ಗುರುತಿಸುತ್ತದೆ
 

ಜಗತ್ತು ವಿಶೇಷ ಪ್ರತಿಭೆಗಳನ್ನು ಗುರುತಿಸುತ್ತದೆ

ಜೆಸಿಐ ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್

by Kundapur Xpress
Spread the love

ಜಗತ್ತು ವಿಶೇಷ ಪ್ರತಿಭೆಗಳನ್ನು ಗುರುತಿಸುತ್ತದೆ

ವಿಶೇಷ ಪರಿಶ್ರಮದಿಂದ ಕೂಡಿದ ಪ್ರಯತ್ನ ಯಶಸ್ಸನ್ನು ದೊರಕಿಸಿಕೊಡುತ್ತದೆ. ತನ್ಮೂಲಕ ವಿಶ್ವವ್ಯಾಪಿಯನ್ನಾಗಿಸಿ ಪ್ರಪಂಚವನ್ನು ಆಳಲು ತೊಡಗುತ್ತದೆ. ಆದ್ದರಿಂದ ಕ್ರಿಯಾಶೀಲತೆಯೇ ಇಂದಿನ ವಿದ್ಯಾರ್ಥಿಗಳಿಗೆಪ್ರೇರಣೆಯಾಗಲಿ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ,ಖ್ಯಾತ ವಾಗ್ಮಿ ಕೆ. ರಾಜೇಂದ್ರ ಭಟ್ ನುಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಸಾಧನೆಯ ಕಡೆಗೆ ತುಡಿತ, ಅವಕಾಶವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಬೇಕೆಂದು ಕರೆ ನೀಡಿದರು.
ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯ ಭಾವನಾತ್ಮಕ ವಿಷಯ . ಸಾಹಿತ್ಯದ ಜೊತೆ ಜೊತೆಗೆ ಭಾವನೆಗಳೊಂದಿಗೆ ಬದುಕಬೇಕಾಗಿದೆ ಎಂದು ನುಡಿದರು. ಈ ಸಂದರ್ಭದಲ್ಲಿ “ಓಲಿಂಪಿಯಾಡ್” ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪದಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ಬಳಗದವರು, ಪಿ ಆರ್ ಓ ಲಿಶನ್ ಗೌಡ, ಆಡಳಿತಾಧಿಕಾರಿ ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಶಿವಕುಮಾರ್ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

   

Related Articles

error: Content is protected !!