ಇತ್ತೀಚಿನ ದಿನಗಳಲ್ಲಿ ಉದುಪಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಸರ ಎಗರಿಸುವಿಕೆಯು ಸಾಮಾನ್ಯವಾಗಿ ಮಹಿಳೆಯರ ಮೇಲೆ ಅವ್ಯಾವಹತನಾಗಿ ನಡೆಯತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಕೆಲವು ಕಾರ್ಯಸೂಚಿಗಳನ್ನು ವಿಶೇಷವಾಗಿ ಮಹಿಳೆಯರು ಅನುಸರಿಸಬೇಕು
ಸರ ಎಗರಿಸುವ ಸಂದರ್ಭದಲ್ಲಿ ಮಹಿಳೆಯರು ಧೃತಿಗೆಡದೇ ಅಪರಿಚಿತರೊಂದಿಗೆ ಜೋರಾಗಿ ಕೂಗುತ್ತಾ ಅವರೊಂದಿಗೆ ಎಳೆದಾಡಬೇಕು ನಿಮ್ಮ ಚೀರಾಟ ಕೇಳಿ ಆಸುಪಾಸಿನವರು ಯಾರಾದರೂ ಬಂದು ಸಹಾಯ ಮಾಡಬಹುದು ಅವರೊಂದಿಗೆ ಎಳೆದಾಡುವ ಅಥವಾ ದೂಡಾಡುವ ಸಂದರ್ಭದಲ್ಲಿ ಅಪರಿಚಿತರ ಮೊಬೈಲ್ ಪರ್ಸ್ ಇನ್ನಿತರ ಯವುದಾದರೂ ವಸ್ತು ಕೈಗೆ ಸಿಕ್ಕಿದಲ್ಲಿ ಅದನ್ನು ದೂರ ಎಸೆಯಬೇಕು ಸಾಧ್ಯವಾದರೇ ಬೈಕ್ ನ ನಂಬ್ರವನ್ನು ಗಮನಿಸಬೇಕು ತಕ್ಷಣ ಹತ್ತಿರದ ಠಾಣಿಯನ್ನು ಸಂಪರ್ಕಿಸಿ ಅವರು ಪರಾರಿಯಾದ ಮಾರ್ಗದ ಬಗ್ಗೆ ಮಾಹಿತಿ ನೀಡಬೇಕು
ಸಾಮಾನ್ಯವಾಗಿ ಬೆಳಿಗ್ಗೆಯ ವಾಕಿಂಗ್ ಸಮಯದಲ್ಲಿ ಇಂತಹ ಘಟನೆಗಳು ನಡೆಯತ್ತಿದ್ದು ಮಹಿಳೆಯರು ತಮ್ಮ ಆಭರಣವನ್ನು ಮುಚ್ಚಿಕೊಂಡು ಹೋಗುವುದು ಉತ್ತಮ