ಕುಂದಾಪುರ : ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜು ವಕ್ವಾಡಿ,ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ 2023- 24 ನೇ ಸಾಲಿನ ಕುಂದಾಪುರ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟವು ಕೋಟೇಶ್ವರದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಶ್ರೀ. ಕೆ.ಸುಭಾಷ್ಚಂದ್ರ ಶೆಟ್ಟಿಯವರು ಗೆಲುವು ಆಟದ ಪ್ರಮುಖ ಭಾಗವಾಗಿದ್ದರು ಕೂಡ ಭಾಗವಹಿಸುವಿಕೆಯೂ ಬಹಳ ಮುಖ್ಯ ವಿಷಯವನ್ನು ಕಲಿಯಲು ಒಂದೊಳ್ಳೆ ವೇದಿಕೆಯಾಗಿರುತ್ತದೆ. ಯಾವುದೇ ತಂಡವು ಬಹುಮಾನವನ್ನು ಗೆಲ್ಲಲು ಪ್ರತಿಯೊಬ್ಬ ಕ್ರೀಡಾಪಟುವಿನ ಕಠಿಣ ಪರಿಶ್ರಮ, ದೃಢತೆ ಹಾಗೂ ಸಮರ್ಪಣಾ ಮನೋಭಾವವು ಅತೀ ಮುಖ್ಯವಾಗಿರುತ್ತದೆ.ನಿಮ್ಮೆಲ್ಲರ ಸತತ ಪ್ರಯತ್ನದಿಂದ ಅಂತರಾಷ್ಟ್ರೀಯ ಮಟ್ಟದವರೆಗೂ ತಲುಪಲು ಸಾಧ್ಯವೆಂದು ಸ್ಪರ್ದಾಳುಗಳಿಗೆ ಹುರಿದುಂಬಿಸಿದರು.
ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಪದವಿಪೂರ್ವ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜೀವನ್ ಶೆಟ್ಟಿಯವರು ಎಲ್ಲಾ ತಂಡದ ಆಟಗಾರಿಗೆ ಶುಭ ಹಾರೈಸಿದರು. ಸದಾ ಚಟುವಟಿಕೆ ಶೀಲರಾಗಿ, ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಕ್ರೀಡೆಯು ಬಹು ಮುಖ್ಯ ಪಾತ್ರ ವಹಿಸುತ್ತದೆಂದು ಎಂದು ಅರಿವು ಶಿಕ್ಷಣ ಸಂಸ್ಥೆಯ ಎ.ವಿ.ಪಿ ಆಗಿರುವ ಶ್ರೀ ರಂಜಿತ್ ಕೋಟ್ಯಾನ್ ರವರು ನುಡಿದರುತಾಲೂಕು ಮಟ್ಟದ ಕ್ರೀಡಾಕೂಟದ ಸಂಚಾಲಕರಾದ ರಾಮ್ ಶೆಟ್ಟಿ, ಹಿರಿಯ ದೈಹಿಕ ಉಪನ್ಯಾಸಕರಾಗಿರುವ ಶ್ರೀ ನಾಗರಾಜ್ ಶೆಟ್ಟಿ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅವಿನಾಶ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು