ವಿದ್ಯಾರ್ಥಿ ವೇತನ ಮಾರ್ಗದರ್ಶನ ಮತ್ತು ಮಹಿಳಾ ದೌರ್ಜನ್ಯ ಪ್ರಕರಣದ ಅರಿವು ಕಾರ್ಯಕ್ರಮ

by Kundapur Xpress

ಕಾಳಾವರ ವರದರಾಜ್ ಎಂ. ಶೆಟ್ಟಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ ಹಾಗೂ ಸಮಾಜ ಕಲ್ಯಾಣ ಇಲಾಖೆಯವರ ಜಂಟಿ ಆಶ್ರಯದಲ್ಲಿ ‘ವಿದ್ಯಾರ್ಥಿ ವೇತನ ಮಾರ್ಗದರ್ಶನ ಮತ್ತು ಮಹಿಳಾ ದೌರ್ಜನ್ಯ ಪ್ರಕರಣದ ಅರಿವು’ ಕಾರ್ಯಕ್ರಮ ನಡೆಯಿತು.
ಕುಂದಾಪುರದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಮೇಶ್ ಕುಲಾಲ್ ಅವರು ವಿದ್ಯಾರ್ಥಿ ವೇತನದ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಕೀಲರಾದ ಕು. ದೀಪಾ ಅವರು ಮಹಿಳಾ ದೌರ್ಜನ್ಯ ಪ್ರಕರಣ ಮತ್ತು ಅಟ್ರಾಸಿಟಿ ಕಾಯ್ದೆ ಬಗ್ಗೆ ಕಾನೂನು ಅರಿವು ಮೂಡಿಸಿ, ಎಚ್ಚರಿಕೆ ವಹಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ವೈದ್ಯ ಎಂ. ವಹಿಸಿದ್ದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ತಂಗಮ್ಮ ಎ.ಎ. ನಿರೂಪಿಸಿದರು. ಡಾ. ಅನುಷಾ ಎಲ್. ಅವರು ಸ್ವಾಗತಿಸಿದರು ಹಾಗೂ ಶೃತಿ ಆಚಾರ್ಯ ಎನ್. ಅವರು ವಂದಿಸಿದರು.

Related Articles