ಕೋಟೇಶ್ವರ :ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ.ಎಸ್ ಶೆಟ್ಟಿ, ಮಾತನಾಡಿ ನಮ್ಮ ಮಾತೃಭಾಷೆಯ ಮೇಲೆ ನಮಗೆ ಸಂಪೂರ್ಣ ಹಿಡಿತ ಮತ್ತು ಹೆಮ್ಮೆ ಜೊತೆಗೆ ಇತರ ಭಾಷೆಗಳ ಮೇಲೆ ಗೌರವ ಇರಬೇಕು ನಮ್ಮ ನಾಡು ನುಡಿಯನ್ನು ಗೌರವಿಸುವುದು ಕೇವಲ ಈ ತಿಂಗಳಿಗೆ ಸೀಮಿತವಾಗದೆ ಪ್ರತಿ ದಿನವೂ ಅದರ ಸವಿಯನ್ನು ಸವಿಯುವ ಬಗೆಯನ್ನು ವಿವಿಧ ನಿದರ್ಶನಗಳ ಮೂಲಕ ತಿಳಿಸಿ ವಿದ್ಯಾರ್ಥಿಗಳಿಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದರು
.ಈ ದಿನದ ವಿಶೇಷ ಎಂಬಂತೆ ಯಾಜ್ಞವಲ್ಕ್ಯ ಕಟ್ಟಡವನ್ನು ಹಳದಿ ಹಾಗೂ ಕೆಂಪು ಬಣ್ಣ ಬಣ್ಣದ ರಂಗೋಲಿ, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು. ಪ್ರೌಢ ವಿಭಾಗದ ವಿದ್ಯಾರ್ಥಿನಿ ಕುಮಾರಿ .ಅನ್ವಿತಾ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದಳು. ವಿದ್ಯಾರ್ಥಿಗಳು ಕನ್ನಡ ಕಸ್ತೂರಿಯ ಕಂಪನ್ನು ಸೂಸುವ ಗುಂಪು ಗಾಯನ , ಕರ್ನಾಟಕದ ವಸ್ತ್ರ ವಿನ್ಯಾಸದ ವೈಶಿಷ್ಟ್ಯ ಹಾಗೂ ವಿವಿಧ ಕನ್ನಡ ಕವಿಗಳ ವೇಷ ಧರಿಸಿ ಅವರ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಕನ್ನಡ ಶಿಕ್ಷಕಿ ವಿಶಾಲ ಶೆಟ್ಟಿ ನಿರೂಪಿಸಿ ವಂದಿಸಿದರು