Home » ಗುರುವಂದನಾ ಮತ್ತು ಕಾರ್ಗಿಲ್ ದಿನಾಚರಣೆ
 

ಗುರುವಂದನಾ ಮತ್ತು ಕಾರ್ಗಿಲ್ ದಿನಾಚರಣೆ

*ಗುರುಕುಲ ಶಾಲೆ

by Kundapur Xpress
Spread the love

ಕುಂದಾಪುರ : ಕೋಟೇಶ್ವರದ ಗುರುಕುಲ ಶಾಲೆಯಲ್ಲಿ ಗುರುಪೂರ್ಣಿಮಾ ಮತ್ತು ಕಾರ್ಗಿಲ್ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ ಅದೊಂದು ಶಕ್ತಿ ಎಂಬುದನ್ನ  ಮತ್ತು ಯೋಧರು ದೇಶಕ್ಕಾಗಿ ಮಾಡುವ ಕಾರ್ಯವನ್ನು ಅರ್ಥಪೂರ್ಣ ಪ್ರಹಸನದ ಮೂಲಕ ಪ್ರೌಢ ವಿಭಾಗದ ವಿದ್ಯಾರ್ಥಿಗಳು ತಿಳಿಸಿದರು,ಜೊತೆಗೆ ಯೋಧರ ತ್ಯಾಗ ಬಲಿದಾನಗಳನ್ನು ನೆನಪಿಸುವ ನಮ್ಮನ್ನು ಮತ್ತು ನಮ್ಮ ದೇಶವನ್ನು ಕಾಪಾಡುವ ಅವರ ಶೌರ್ಯ ಸಾಹಸಗಳನ್ನು ವಿದ್ಯಾರ್ಥಿನಿಯರು ಭಾವಪೂರ್ಣ ಗೀತೆಯೆಂದರೆ ಮೂಲಕ ಎಲ್ಲರಿಗೂ ಅರ್ಥೈಸಿದರು.ನಂತರ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮವನ್ನು ಮಾಡುವ ಮೂಲಕ ನಮಗೆ ವಿದ್ಯೆ ನೀಡುವ ಗುರುವಿನಲ್ಲಿ ದೇವರನ್ನು ಕಾಣುವ ನಮ್ಮ ಸನಾತನ ಸಂಸ್ಕಾರದ ರೀತಿಯಲ್ಲಿ ಪಾದ ಮುಟ್ಟಿ ನಮಸ್ಕಾರ ಮಾಡಿ ಇಂದು ಗುರುವಿನ ಮುಂದೆ ಬಾಗಿಸಿದ ತಲೆ ಮುಂದೆ ಸಮಾಜದಲ್ಲಿ ತಲೆ ಎತ್ತಿ ಬಾಳುವೆ ಎಂಬ ಅವರ ದೃಢ ಸಂಕಲ್ಪ ಹಾಗೂ ತಮ್ಮ ಗುರು ಭಕ್ತಿಯನ್ನ ತೋರಿಸಿದ ರೀತಿ ನಿಜಕ್ಕೂ ಮಕ್ಕಳ ಸಂಸ್ಕಾರದ ಜೊತೆಗಿನ ಶಿಕ್ಷಣವನ್ನು ಅರ್ಥೈಸುವಂತಿತ್ತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಗಿಲ್ ದಿವಸದ ಮಹತ್ವವನ್ನ ಕುಮಾರಿ ಕೀರ್ತನ ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಸಿದರು.  ಕಾರ್ಯಕ್ರಮವನ್ನು ಮಾಸ್ಟರ್. ಆತೀಶ್ ರಾಜ್ ನಿರೂಪಿಸಿ, ಕುಮಾರಿ. ಮನಸ್ವಿ ಸ್ವಾಗತಿಸಿ, ಕುಮಾರಿ.ಚಂದನಾ ವಂದಿಸಿದರು.

   

Related Articles

error: Content is protected !!