Home » ಹೆಚ್ಚಿದ ಅಪಾಯದ ವರ್ತನೆಯ ಸಮಸ್ಯೆಗಳ ಮೇಲೆ ಹದಿಹರೆಯದ ಶಿಕ್ಷಣ
 

ಹೆಚ್ಚಿದ ಅಪಾಯದ ವರ್ತನೆಯ ಸಮಸ್ಯೆಗಳ ಮೇಲೆ ಹದಿಹರೆಯದ ಶಿಕ್ಷಣ

by Kundapur Xpress
Spread the love

ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಅಕ್ಟೋಬರ್ 7ರಂದು, ಹೆಚ್ಚಿದ ‘ಅಪಾಯದ ವರ್ತನೆಯ ಸಮಸ್ಯೆಗಳ ಮೇಲೆ ಹದಿ ಹರೆಯದ ಶಿಕ್ಷಣ ‘ಎಂಬ ಕಾರ್ಯಗಾರ ನಡೆಯಿತು. ಡಾI ಸೌಜನ್ಯ ಶೆಟ್ಟಿ ಏ. ವಿ. ಬಾಳಿಗ ಆಸ್ಪತ್ರೆ ಉಡುಪಿ ಇವರು ಹೆಚ್ಚಿದ ಅಪಾಯದ ವರ್ತನೆಯ ಸಮಸ್ಯೆಗಳ ಮೇಲೆ ಹದಿ ಹರೆಯದ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ

ಅವರು ಹದಿಹರೆಯರ ವಯಸ್ಸು ಸುಂದರವಾದದ್ದು, ಇದರ ಸದುಪಯೋಗ ಅತ್ಯಗತ್ಯವಾಗಿದೆ. ಪೋಷಕರಿಗಿಂತ ಹೆಚ್ಚಾಗಿ ಸ್ನೇಹಿತರ ಜೊತೆಗೆ ಸಮಯ ಕಳೆಯಲು ಬಯಸುವುದು, ಪೋಷಕರು ಮತ್ತು ಮಕ್ಕಳ ನಡುವಿನ ವಾದಗಳು, ಒಡಹುಟ್ಟಿದವರ ಪೈಪೋಟಿ, ಮೊಬೈಲ್ ಬಳಕೆ, ಆಹಾರ ಪದ್ಧತಿ, ಉಡುಪು ಧರಿಸುವ ಶೈಲಿ, ಅಡ್ಡಿಪಡಿಸುವ ನಡವಳಿಕೆ, ಅಕ್ರಮಣಕಾರಿ ಬೆದರಿಸುವಿಕೆ, ಡ್ರಗ್ಸ್ ಬಳಕೆ, ತರಗತಿಗೆ ಸರಿಯಾಗಿ ಬರದೇ ಇರುವದು, ಖಿನ್ನತೆಯ ಆಲೋಚನೆಗಳು, ಆತ್ಮಹತ್ಯೆಯ ವಿಷಯ, ಇಂಟರ್ನೆಟ್ ಚಟಗಳು, ಇವೆಲ್ಲವೂ ಹದಿಹರೆಯ ಗುಣಲಕ್ಷಣಗಳು. ಇವುಗಳನ್ನು ಹಿಮ್ಮೆಟ್ಟಿಸಿ ತನ್ನನ್ನು ತಾನು ಉತ್ತಮ ಪಡಿಸಿಕೊಳ್ಳಲು ಜಾಗೃತೆ ವಹಿಸಬೇಕೆಂದು ಮಕ್ಕಳನ್ನು ಉದ್ದೇಶಿಸಿ ಸಲಹೆಗಳನ್ನು ನೀಡಿದರು

ಕನಸು ಕಾಣುವುದು, ಕೇವಲ ಕನಸುಗಳು ಸಾಕಾಗುವುದಿಲ್ಲ ಪ್ರಯತ್ನಗಳು ಮತ್ತು ಶ್ರಮ ಬಹಳ ಮುಖ್ಯವೆನಿಸುತ್ತದೆ. ತರಗತಿಯಲ್ಲಿ ಟಿಪ್ಪಣಿ ಮಾಡಿಕೊಳ್ಳುವುದು, ನಿದ್ರೆ ಆಹಾರ ಕ್ರಮ ಸರಿಯಾಗಿ ನಿಭಾಯಿಸುವುದು, ವಿದ್ಯಾಭ್ಯಾಸದಲ್ಲಿ ಹಿಂದೆ ಸರಿಯದೆ ಮುನ್ನಡೆಯುವುದು ಜೊತೆಗೆ ¸ Sಕಿ4ಖ ವಿಧಾನವನ್ನು ಬಳಸಿ ಅಭ್ಯಾಸದಲ್ಲಿ ಲಾಭವನ್ನು ಗಳಿಸುವುದು, ಸಮಾಲೋಚನೆಯಿಂದ ವಿಷಯವನ್ನು ಸಂಗ್ರಹಿಸುವುದು ಒತ್ತಡವನ್ನು ತಪ್ಪಿಸಲು ತೆಗೆದುಕೊಳ್ಳುವ ಕ್ರಮದ ಬಗ್ಗೆ ಡಾಕ್ಟರ್ ಪದ್ಮ ರಾಘವೇಂದ್ರ ಎಸ್. ವಿ. ಬಾಳಿಗ ಆಸ್ಪತ್ರೆ ಉಡುಪಿ ಇವರು ಸ್ಮರಣ ಶಕ್ತಿಯ ವಿಚಾರದಡಿಯಲ್ಲಿ ವಿದ್ಯಾರ್ಥಿಗಳಿಗೆ ಕೆಲವೊಂದು ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯ ನಿರ್ವಾಹಕರಾದ, ಶ್ರೀಮತಿ ಅನುಪಮಾ .ಎಸ್. ಶೆಟ್ಟಿ ,ಮತ್ತು ಶಾಲಾ ಪ್ರಾಂಶುಪಾಲರಾದ ಮೋಹನ್ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ , ಶ್ರೀಮತಿ. ಸುಮಲತಾ ನಿರೂಪಿಸಿ, ವಂದಿಸಿದರು.

   

Related Articles

error: Content is protected !!