ಕೊಂದಾಪುರ: ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಇಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಈ ಬಗ್ಗೆ ಪೋಷಕರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಸಲುವಾಗಿ ವಿಶೇಷ ಕಾರ್ಯಗಾರವೊಂದನ್ನ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ವಿರೂಪಾಕ್ಷ ದೇವರಮನೆ ಮನೋವೈದ್ಯರು ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ .ಉಡುಪಿ ಇವರು ಮಾತನಾಡಿ ನಮ್ಮ ದೈನಂದಿನ ಚಟುವಟಿಕೆ ಆರಂಭಗೊಂಡ ಸಮಯದಿಂದ ನಾವು ಇಡೀ ದಿನ ಜಂಜಾಟದಲ್ಲಿ ದಿನವನ್ನು ಕಳೆಯುತ್ತೇವೆ. ಎಷ್ಟು ಜನ ಪೋಷಕರು ಇಂದು ತಮ್ಮ ಮಕ್ಕಳ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ ,ದಿನದಲ್ಲಿ ಒಂದು ಸಮಯವನ್ನು ನಿಮ್ಮವರಿಗಾಗಿ ಮೀಸಲಿಡಿ ಅದು ಭಜನೆ/ ಊಟದ ಸಮಯ / ಎಲ್ಲಾ ಕುಳಿತು ದಿನಚರಿಯ ಬಗ್ಗೆ ಚರ್ಚೆ ಕೂಡ ಆಗಬಹುದು .ಹೀಗೆ ನಿಮ್ಮ ಮಕ್ಕಳ ಜೊತೆ ನೀವಿದ್ದೀರಾ ಎಂಬ ನಂಬಿಕೆ ಅವರಿಗೆ ಬರುವ ಹಾಗೆ ಅವರಲ್ಲಿ ಆತ್ಮಸ್ಥೈರ್ಯವನ್ನ ತುಂಬಿ ಸಮಾಜದ ಒಳಿತು ಕೆಡುಕುಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಿದರೆ ಮಾತ್ರ ಅವರು ನಿಮ್ಮೊಂದಿಗೆ ಮುಕ್ತವಾಗಿ ಎಲ್ಲ ವಿಷಯಗಳನ್ನ ಚರ್ಚಿಸುವಷ್ಟು ಹತ್ತಿರ ಆದರೆ ಮಾತ್ರ ಅವರು ನೀವು ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯ. ಪೋಷಕರ ಆಯ್ಕೆಯನ್ನು ಮಗುವಿನ ಮೇಲೆ ಹಾಕದೆ ಅವರ ಭಾವನೆಗಳನ್ನು ಗೌರವಿಸುವ ಕೆಲಸ ಮಾಡಬೇಕೆ ಹೊರತು ಅವರ ತಪ್ಪುಗಳನ್ನು ಪದೇ ಪದೇ ಹೇಳುತ್ತಾ ಇದ್ದಾಗ ಅವರಲ್ಲಿ ನಕಾರಾತ್ಮಕ ಮನೋಭಾವ ಬೆಳೆಯುತ್ತಾ ಅವರು ನಿಮ್ಮಿಂದ ದೂರ ಆಗಲು ಪ್ರಯತ್ನಿಸುತ್ತಾರೆ. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆ ,ತಾಯಿ ಮತ್ತು ಶಿಕ್ಷಕರ ಪಾತ್ರ ಮಹತ್ವ ಪೂರ್ಣವಾದದು ಎಂಬುದನ್ನೂ ವಿವಿಧ ನಿದರ್ಶನಗಳನ್ನು ತೋರಿಸುತ್ತಾ ಅರ್ಥಪೂರ್ಣವಾಗಿ ಪೋಷಕರಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮ.ಎಸ್.ಶೆಟ್ಟಿ ಇವರು ಮಾತನಾಡಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಪೋಷಕರಿಗೆ ಇದೆ. ಪೋಷಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳನ್ನು ಸದಾ ಸಕಾರಾತ್ಮಕವಾಗಿ ತೆಗೆದುಕೊಂಡು ಹೋಗಲು ಸಹಾಯವಾಗುತ್ತದೆ.ಆ ನಿಟ್ಟಿನಲ್ಲಿ ಶಾಲೆ ಮತ್ತು ಪೋಷಕರು ಜೊತೆ ಸೇರಿ ಕೆಲಸ ಮಾಡುವ ಎಂದು ತಿಳಿಸಿ ,ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ.ಮೋಹನ್.ಕೆ, ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸಹಶಿಕ್ಷಕಿ ನಾಗರತ್ನ ನಿರೂಪಿಸಿ, ಸಹಶಿಕ್ಷಕಿ ಶ್ರೀ ವಿದ್ಯಾ ಸ್ವಾಗತಿಸಿ,ಸಹಶಿಕ್ಷಕಿ ಮಮತಾ ವಂದಿಸಿದರು. ಅತಿಥಿ ಪರಿಚಯವನ್ನು ಸಹಶಿಕ್ಷಕಿ ಸಾಕ್ಷಿತಾ ಮಾಡಿದರ