ಕೋಟೇಶ್ವರ : ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಕೋಟೇಶ್ವರದಲ್ಲಿ ಅಜ್ಜ-ಅಜ್ಜಿಯಂದಿರ ದಿನವನ್ನು ಆಚರಿಸಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮತಿ ಭಾಗ್ಯ.ಎಸ್.ಕಾಮತ್ ರವರು ಆಗಮಿಸಿದ್ದರು.ಇವರು ತಮ್ಮ ಬದುಕಿನ ಅತ್ಯಂತ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕಿ ಅಜ್ಜ-ಅಜ್ಜಿಯರು ಹಳೆಯವರು ಮಾತ್ರವಲ್ಲ ಜೀವನದ ಪಾಠಗಳನ್ನು ಅನುಭವಗಳ ಮೂಲಕ ಕಲಿತವರು.ಮೊಮ್ಮಕಳಿಗೆ ನಾವು ಸ್ವಲ್ಪವಾದರೂ ಸಮಯ ನೀಡಿ ಅವರನ್ನು ಸತ್ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಅಜ್ಜ-ಅಜ್ಜಿಯಂದಿರ ಕರ್ತವ್ಯವಾಗಿದೆ ಎಂದು ಹೇಳಿದರು.ಗುರುಕುಲ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಜಂಟಿ ಕಾರ್ಯ ನಿರ್ವಾಹಕರಾಗಿರುವ ಶ್ರೀಮತಿ ಅನುಪಮ.ಎಸ್.ಶೆಟ್ಟಿ, ಶಾಲಾ ಪ್ರಾಂಶುಪಾಲರಾದ ಶ್ರೀಯುತ ಮೋಹನ್.ಕೆ ರವರು ಉಪಸ್ಥಿತರಿದ್ದರು .ಅಜ್ಜ-ಅಜ್ಜಿಯವರಿಗೋಸ್ಕರ ಹಲವು ಸ್ಪರ್ಧೆಗಳನ್ನು ಎರ್ಪಡಿಸಿದ್ದು ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಅಜ್ಜ-ಅಜ್ಜಿಯರಿಗೋಸ್ಕರ ಸಂಗೀತ, ನೃತ್ಯ ಮತ್ತು ಭಾಷಣಗಳನ್ನು ಮಾಡಿ ಅಜ್ಜ -ಅಜ್ಜಿಯರಿಗೆ ತಮ್ಮ ಪ್ರೀತಿಯನ್ನು ಹಂಚಿದರು.ಕಾರ್ಯಕ್ರಮವನ್ನುಸಹ ಶಿಕ್ಷಕಿ ಕುಮಾರಿ ಶ್ರುತಿ ನಿರೂಪಿಸಿ,ಸಹ ಶಿಕ್ಷಕಿ ಶ್ರೀಮತಿ ಶುಭಲಕ್ಷ್ಮಿ ಸ್ವಾಗತಿಸಿ,ಸಹ ಶಿಕ್ಷಕಿ ಶ್ರೀಮತಿ ಜ್ಯೋತಿ ವಂದಿಸಿದರು.ಸಹ ಶಿಕ್ಷಕಿ ನಾಗರತ್ನ ಅತಿಥಿ ಪರಿಚಯ ಮಾಡಿದರು.