ಕೋಟೇಶ್ವರ : ದೈನಂದಿನ ಆಟ ಪಾಠಗಳಿಗಿಂತ ವಿಭಿನ್ನ ಕಲಿಕಾನುಭವಕ್ಕೆ ಸಾಕ್ಷಿಯಾಗಲು ಕೆಪಿಎಸ್ ಕೋಟೇಶ್ವರದ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ‘ *ಮಕ್ಕಳ ಹಬ್ಬ’ವನ್ನು ಹಮ್ಮಿಕೊಳ್ಳಲಾಗಿತ್ತು.ಬಲೂನು ಒಡೆಯುವುದು,ಮೂರುಕಾಲಿನ ಓಟ, ಗೋಣಿಚೀಲದ ಓಟ, ಸಂಗೀತ ಖುರ್ಚಿಯಂತಹ ಹತ್ತಾರು ವಿನೋದದ ಆಟೋಟಗಳನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಶಿಕ್ಷಣ ಇಲಾಖೆಯ ಮಹಾತ್ವಾಕಾಂಕ್ಷಿ ಯೋಜನೆಯಾದ ಶಿಕ್ಷಕ ಪಾಲಕ ಮಹಾಸಭೆಯಲ್ಲಿ ಉಪಸ್ಥಿತರಿದ್ದ ಪೋಷಕರಿಗೂ ಕೂಡ ವಿವಿಧ ಮನರಂಜನಾ ಆಟೋಟಗಳನ್ನು ನಡೆಸಿ ಪ್ರೋತ್ಸಾಹಿಸಲಾಯಿತು. ಶಾಲೆಯ ಅತಿ ಕಿರಿಯ ವಿದ್ಯಾರ್ಥಿ ಕುಮಾರ್ ಅರ್ಜುನ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ನಾಯಕ ವಿವೇಕ್ ಶಾಲಾ ನಾಯಕಿ ಸಂಜನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿರವರು ಇಂದಿನ ವಿದ್ಯಾರ್ಥಿ ಸಮುದಾಯ ಅನುಸರಿಸಬೇಕಾದ ನೈತಿಕತೆಯ ಅಗತ್ಯತೆಯನ್ನು ಪ್ರತಿಪಾದಿಸಿದರು.ಆಟೋಟಗಳಲ್ಲಿ ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಸುಧಾಬಾಯಿ ನಾಯಕ್ ಹಾಗೂ ವಿಜೇತ ಪೋಷಕರ ಪಟ್ಟಿಯನ್ನು ಹಿರಿಯ ಶಿಕ್ಷಕಿ ಜಯಶ್ರೀ ಭಟ್ ರವರು ವಾಚಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಾದ ಲೀಲಾ ಹಾಗೂ ರೇಷ್ಮಾರವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಶಾಲಾ ಪ್ರಗತಿಯ ಬಗ್ಗೆ ಪೋಷಕರೊಂದಿಗೆ ಆರೋಗ್ಯಕರ ಸಂವಾದ ನಡೆಸಲಾಯಿತು.ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಾಲಾ ಶಿಕ್ಷಕರಿಂದ ಪ್ರಯೋಜಿಸಲ್ಪಟ್ಟ ಸಿಹಿ ತಿನಿಸುಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಯಿತು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಶ್ರೀಲಕ್ಷ್ಮಿ ಸರ್ವರನ್ನು ಸ್ವಾಗತಿಸಿದರು.ಸ್ಪೂರ್ತಿ ಧನ್ಯವಾದ ಸಲ್ಲಿಸಿದರು. ಮನಿಸ್ವಿ ಮತ್ತು ಹಮ್ಧಾ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭದಲ್ಲಿ ಅಧ್ಯಾಪಕರು,ಸಿಬ್ಬಂದಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

