Home » ಗುರುಕುಲ ಶಾಲೆ- ಪೋಷಕರ ಸಭೆ
 

ಗುರುಕುಲ ಶಾಲೆ- ಪೋಷಕರ ಸಭೆ

by Kundapur Xpress
Spread the love

ಕುಂದಾಪುರ : ಕೋಟೇಶ್ವರದ  ಗುರುಕುಲ ವಿದ್ಯಾಸಂಸ್ಥೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಪ್ರೌಢ ಶಾಲಾ ವಿಭಾಗದ ಪ್ರಥಮ ರಕ್ಷಕಶಿಕ್ಷಕ ಸಭೆಯನ್ನು ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ.ರೇಖಾ.ವಿ. ಬನ್ನಾಡಿಯವರು ಆಗಮಿಸಿದ್ದರು  ಶಾಲಾ ಪ್ರಾಂಶುಪಾಲರಾದ ಶ್ರೀ ಮೋಹನ್.ಕೆ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶೈಕ್ಷಣಿಕ ಕಾರ್ಯ ಯೋಜನೆಗಳನ್ನು ಹಾಗೂ ಶಾಲಾ ಚಟುವಟಿಕೆಗಳನ್ನು ವಿವರವಾಗಿ ತಿಳಿಸಿದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ರೇಖಾ.ವಿ. ಬನ್ನಾಡಿ ಯವರು ಕಥೆಯ ಮೂಲಕ ಎಲ್ಲಿ ಮಾತನಾಡಬೇಕು, ಹೇಗೆ ಮಾತನಾಡಬೇಕು, ಎಷ್ಟು ಮಾತನಾಡಬೇಕು, ಎಂಬ ವಿಚಾರ ನಮಗೆ ತಿಳಿದಿರಬೇಕು ಮಕ್ಕಳ ಭಾವನೆಗಳನ್ನು ಗೌರವಿಸಿ, ನಿಮ್ಮ ಮಗುವಿನ ಎದುರು ಶಿಕ್ಷಕರ ಕುರಿತು ಯಾವಾಗಲೂ ಗೌರವದಿಂದ ಮಾತನಾಡಿ ಹಾಗೂ ವಸ್ತುಸ್ಥಿತಿಯನ್ನು ಅರಿತು ಮಾತನಾಡಿ , ಮಗು ಶಾಲೆ ಗಿಂತ ಹೆಚ್ಚು ಸಮಯ ತನ್ನ ಪೋಷಕರ ಜೊತೆ ಕಳೆಯುತ್ತದೆ ಅದರ ಬಗ್ಗೆ ನಿಮಗೆ ಅರಿವಿರಲಿ ಎಂದು ಪೋಷಕರಿಗೆ ತಿಳಿಸಿದರು .ಮಕ್ಕಳಿಗೆ ಕಲಿಸುವುದರ ಜೊತೆಗೆ ನೀವು ಕಲಿಯಿರಿ ,ಮಕ್ಕಳು ನಮ್ಮ ನಡವಳಿಕೆಯನ್ನು ಗಮನಿಸುತ್ತಾರೆ ಅದರ ಕಡೆ ಗಮನವಿರಲಿ ಅವರನ್ನು ಕೇವಲ ಅಂಕ ಪಡೆಯುವ ಯಂತ್ರವನ್ನಾಗಿ ಮಾಡದೇ,ಸೋಲುಗೆಲುವು, ಕಷ್ಟಸುಖ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಮಕ್ಕಳಲ್ಲಿ ಬೆಳೆಸಿ ಮಕ್ಕಳಿಗೆ ಅವರದೇ ಆದ ರೀತಿಯಲ್ಲಿ ಗುರುತಿಸುವಿಕೆಯನ್ನು ಕಲಿಸಿ ಎಂದು ತಮ್ಮ ಅತಿಥಿ ಭಾಷಣದಲ್ಲಿನುಡಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಜೆಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ.ಎಸ್. ಶೆಟ್ಟಿ ಮಾತನಾಡಿ ಮಕ್ಕಳಲ್ಲಿ ಬೇದ ಭಾವವನ್ನು ಮಾಡಬಾರದು ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣಬೇಕು. ನಾವೆಲ್ಲರೂ ಭಾವನಾಜೀವಿಗಳು ಹಾಗಾಗಿ ಎಲ್ಲರ ಭಾವನೆಗಳನ್ನು ಗೌರವಿಸೋಣ ಎಂದು ತಿಳಿಸಿದರು

ಸಹಶಿಕ್ಷಕ ರಾಘವೇಂದ್ರ ಅಮುಜೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಅತಿಥಿ ಪರಿಚಯವನ್ನು ಸಹಶಿಕ್ಷಕ ರವಿಶಂಕರ್ ಮಾಡಿ ಸಹಶಿಕ್ಷಕಿ ಪೂರ್ಣಿಮಾ ವಂದಿಸಿದರು ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕ ವೃಂದದವರು ಪೋಷಕರು ಉಪಸ್ಥಿತರಿದ್ದರು.

   

Related Articles

error: Content is protected !!