ಕುಂದಾಪುರ :ಕೋಟೇಶ್ವರದ ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭ ಜರುಗಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿಟ್ಟೆಯ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಪ್ರೊಫೆಸರ್ ಮತ್ತು ಎಚ್ ಒ ಡಿ ಗಳಾದ ಡಾ.ಮಹಾಬಲೇಶ್ ಶೆಟ್ಟಿ ಯವರು ಮಾತನಾಡಿ ನಿಜವಾದ ಸಂಸತ್ತಿನ ಕಾರ್ಯ ವೈಖರಿ ಪ್ರತಿಯೊಬ್ಬ ನಾಗರಿಕನ ಹಕ್ಕು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು .ಶಿಕ್ಷಣವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ
ನೀವು ಪಡೆದ ಶಿಕ್ಷಣ ಅರ್ಥಪೂರ್ಣವಾಗಬೇಕಾದರೆ ಮೊದಲು ನೀವು ನಿಮ್ಮ ಶಿಕ್ಷಕರನ್ನು ಮತ್ತು ಶಿಕ್ಷಣ ಸಂಸ್ಥೆಯನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಕೌಶಲ್ಯ ಭರಿತ ಶಿಕ್ಷಣ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕೆ ಸಹಕಾರಿ ಪ್ರತಿಯೊಬ್ಬ ವಿಧ್ಯಾರ್ಥಿಯು ತನ್ನಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು, ನಾಯಕತ್ವ ಗುಣ ಹುಟ್ಟಿನಿಂದ ಬರುವುದಿಲ್ಲ ಅದನ್ನು ತಾವಾಗೇ ಬೆಳೆಸಿಕೊಳ್ಳಬೇಕು ಆ ಗುಣವೂ ಉತ್ತಮ ಮಾತುಗಾರಿಕೆ ಮತ್ತು ನಡವಳಿಕೆಯಿಂದ ಮಾತ್ರ ಬೆಳೆಸಿಕೊಳ್ಳಲು ಸಾಧ್ಯ ಜೊತೆಗೆ ಸಂಸ್ಥೆಯ ನೀತಿ ನಿಯಮಗಳನ್ನು ಪಾಲಿಸುತ್ತಾ ಸಂಸ್ಥೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿ ಎಂದು ನುಡಿದರು
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ.ಮೋಹನ್ .ಕೆ ವಿದ್ಯಾರ್ಥಿ ಸಂಸತ್ತಿನ ಕಾರ್ಯ ವೈಖರಿ ಬಗ್ಗೆ ವಿವರಿಸಿದರು ಗುರುಕುಲ ವಿದ್ಯಾಸಂಸ್ಥೆಯ ಕಾರ್ಯನಿರ್ವಾಹಕರಾದ ಶ್ರೀಯುತ.ಸುಭಾಶ್ಚಂದ್ರ ಶೆಟ್ಟಿ ಮತ್ತು ಶ್ರೀಮತಿ ಅನುಪಮಾ ಎಸ್.ಶೆಟ್ಟಿ ಇವರು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು
ವಿದ್ಯಾರ್ಥಿ ಮುಖಂಡರಾಗಿ ಮಾಸ್ಟರ್.ಧವಲ್.ಎಸ್.ಶೆಟ್ಟಿ ಹಾಗೂ ಉಪ ಮುಖಂಡರಾಗಿ ಆಗಿ ಮಾಸ್ಟರ್.ಭರತ್.ಬಿ.ಎಸ್ ಹಾಗೂ ವಿರೋಧ ಪಕ್ಷದ ಮುಖಂಡರಾಗಿ ಮಾಸ್ಟರ್.ಚಿರಾಗ್.ಆರ್ ಮತ್ತು ಆಡಳಿತ ಪಕ್ಷದ ಇತರ ಮುಖಂಡರು ಇತರ ಸದಸ್ಯರು ಅಧಿಕಾರ ವಹಿಸಿಕೊಂಡರು