Home » ಶಾಲಾ ರಕ್ಷಕ – ಶಿಕ್ಷಕ ಸಭೆ
 

ಶಾಲಾ ರಕ್ಷಕ – ಶಿಕ್ಷಕ ಸಭೆ

by Kundapur Xpress
Spread the love

ಶಾಲಾ ರಕ್ಷಕ – ಶಿಕ್ಷಕ ಸಭೆ

ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಆಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಹಿಸಿ ಹಣಕ್ಕಿಂತ ಮಿಗಿಲಾದ ಗುಣವಂತರಾದರೆ ಎಲ್ಲರೂ ನಮ್ಮವರೆ . ಮಕ್ಕಳು ಹಣವಂತರಾಗದೆ ಗುಣವಂತರಾಗಲಿ ಎಂದು ಆಶಿಸಿ ಶಾಲಾ ಗುಣಮಟ್ಟದ ಬಗ್ಗೆ ಪೋಷಕರಿಂದ ಮಾಹಿತಿಯನ್ನು ಕಲೆಹಾಕಿದರು.ಗುರಿ ಸಾಧನೆಯಲ್ಲಿ ಮಕ್ಕಳು, ಶಿಕ್ಷಕರು, ಪೋಷಕರ ಪಾತ್ರ ಬಹು ಮುಖ್ಯ ಹಾಗೂ ಹೆಣ್ಣು ಮಕ್ಕಳ ಸಮಸ್ಯೆ ಆ ಸಮಯದಲ್ಲಿ ಮಕ್ಕಳೊಂದಿಗೆ ತಾಯಂದಿರು ಹೇಗೆ ಇರಬೇಕು

ಮಾತ್ರವಲ್ಲದೆ ಮಕ್ಕಳನ್ನು ಯಾರೊಂದಿಗೂ ಹೋಲಿಸದೆ ಅವರನ್ನು ಪ್ರೋತ್ಸಾಹಿಸಿ ಮಕ್ಕಳೊಂದಿಗೆ ಸ್ನೇಹಿತರಂತೆ ಇರಬೇಕು ಅವರಿಗೆ ಮೌಲ್ಯಯುತ ವಿಚಾರಗಳು ಮನೆಯಲ್ಲಿಯೆ ಪ್ರಾರಂಭವಾಗಲಿ ಅವರಿಗೆ ತಮ್ಮ ಸಮಯವನ್ನು ನೀಡಿ ಎಂದು ಉಡುಪಿ ಬಿಷಪ್ ಹೌಸಿನ ಕುಟುಂಬ ಆಯೋಗದ ನಿರ್ದೇಶಕರು ಆಗಿರುವ ಶ್ರೀಯುತ ಲೆಸ್ಲಿ ಅರೊಸಾರವರು

ಪೋಷಕರಿಗೆ ತಿಳಿಸಿದರು. ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ತೆರೆಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ತಿಳಿಸಿದರು. ಶಾಲಾ ಹಿಂದಿನ ವರ್ಷದ ಸಭೆಯ ವರದಿಯನ್ನು ಸಹ ಶಿಕ್ಷಕಿ ಅಂಕಿತಾರವರು ಹಾಗೂ ಹಿಂದಿನ ವರ್ಷದ ಶೈಕ್ಷಣಿಕ ವರದಿಯನ್ನು ಸಹ-ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ವಾಚಿಸಿದರು. ಶ್ರೀಮತಿ ನಿಮಿಷಾರವರು ಅಯವ್ಯಯ ವಾಚಿಸಿದರು. ಸಹ ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೆರೋ ಸ್ವಾಗತಿಸಿದರು. ಸಹ ಶಿಕ್ಷಕಿ ಮಮತಾ ವಂದಿಸಿದರು. ಸಹ ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು .

   

Related Articles

error: Content is protected !!