ಮೂಡ್ಲಕಟ್ಟೆ: ಐಎಂಜೆ ವಿದ್ಯಾಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿವೈನ್ ಪಾರ್ಕ್‍ನ ಎಸ್ ಎಚ್ ಆರ್ ಎಫ್ ವಿಭಾಗದ ವೈದ್ಯಕೀಯ ನಿರ್ದೇಶಕರಾದ ಡಾ. ವಿವೇಕ್ ಎ. ಉಡುಪರವರು ಆಗಮಿಸಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಐ.ಎಂ.ಜಯರಾಮ ಶೆಟ್ಟಿಯವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿದ ಸಂಸ್ಥೆಯ ಉದ್ಧೇಶ ಇಡೇರುತ್ತಿದೆಯಲ್ಲದೆ. ಅವರ ಮಗನಾದ ಶ್ರೀ ಸಿದ್ಧಾರ್ಥ ಜೆ. ಶೆಟ್ಟಿಯವರು ಸಂಸ್ಥೆಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು. ಸಂಸ್ಥೆಯಲ್ಲಿ ಸಿಗುತ್ತಿರುವ ಮೌಲ್ಯಯುತ ಶಿಕ್ಷಣಕ್ಕಾಗಿ ಅವರು ಎಲ್ಲರನ್ನು ಅಭಿನಂದಿಸಿದರು. ಚಿಕ್ಕ ವಯಸ್ಸಿನಿಂದಲೂ ತಮಗೆ ಐ.ಎಂ.ಜಯರಾಮ ಶೆಟ್ಟಿಯವರು ಸ್ಪೂರ್ತಿ ಎಂದು ತಿಳಿಸಿದರು. ಐಎಂಜೆ ಸಂಸ್ಥೆಗಳ ನಿರ್ದೇಶಕರಾದ ದೋಮ ಚಂದ್ರಶೇಖರ್‍ರವರು ಮಾತನಾಡಿ ಸಂಸ್ಥಾಪಕರ ಸಾಧನೆಗಳ ಬಗ್ಗೆ ಒಂದು ಪುಸ್ತಕವನ್ನು ಬಿಡುಗಡೆ ಮಾಡುವುದು ಸೂಕ್ತ ಏಕೆಂದರೆ ಅದು ಯುವಜನತೆಗೆ ಸ್ಪೂರ್ತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಶ್ರೀದೇವಿ ಆಂಬುಲೆನ್ಸ್ ಸರ್ವಿಸ್, ಕುಂದಾಪುರದ ಶ್ರೀ ವಾಸುದೇವ ಹಂದೆ ಅವರಿಗೆ ಅವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಜೆಯ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿಯವರು ವಹಿಸಿದ್ದರು. ಶ್ರೀ ಐ.ಎಂ.ಜಯರಾಮ ಶೆಟ್ಟಿಯವರ ಪ್ರತಿಮೆಗೆ ಮಾಲಾರ್ಪಣೆಯ ನಂತರ ಪುಷ್ಪಾರ್ಪಣೆ ಮಾಡಿ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕಾರ್ಯಕ್ರಮಕ್ಕೆ ಶ್ರೀಯುತ ಸುಧಾಕರ ಹೆಗ್ಡೆ ಮೂಡ್ಲಕಟ್ಟೆ, ಎಂಎನ್‍ಬಿಎಸ್ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟ್‍ನ ಟ್ರಸ್ಟಿಯಾದ ಶ್ರೀಮತಿ ವಿದ್ಯಾ ಜೆ. ಶೆಟ್ಟಿ, ಹಾಗೂ ಟ್ರಸ್ಟಿಯಾದ ಶ್ರೀಯುತ ರಾಮರತನ್ ಶೆಟ್ಟಿ, ಹಾಗೂ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀಮತಿ ಅನಿಷಾ ರೈ ಸಿ.ಎ, ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್, ಐಎಂಜೆ ವಿದ್ಯಾಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ಎಂಐಟಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂ, ಎಂಸಿಎನ್ ಸಂಸ್ಥೆಯ ಪ್ರಾಂಶುಪಾಲರಾದ ಪ್ರೋ. ಜೆನ್ನಿಫರ್ ಫ್ರೀಡಾ ಮಿನೇಜಸ್, ಐಎಂಜೆ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಪಟೇಲ್, ಐಎಂಜೆ ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರೋ. ಮೆಲ್ವಿನ್ ಡಿಸೋಜ, ಐಎಂಜೆಐಎಸ್‍ಸಿ ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರೋ. ಜಯಶೀ¯ ಕುಮಾರ್, ವಿದ್ಯಾ ಅಕಾಡೆಮಿಯ ರಷ್ಮಾ ಶೆಟ್ಟಿ ಹಾಗೂ ಐಎಂಜೆ ವಿದ್ಯಾ ಸಂಸ್ಥೆಗಳ ಭೋಧಕ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಐಎಂಜೆಐಎಸ್‍ಸಿ ಸಂಸ್ಥೆಯ ಬಿಸಿಎ ವಿದ್ಯಾರ್ಥಿನಿಗಳಾದ ಕು. ರಚನಾ ಸ್ವಾಗತಿಸಿ, ಕು. ನಿರೋಷಾ ವಂದಿಸಿದರು. ಐಎಂಜೆಐಎಸ್‍ಸಿ ಸಂಸ್ಥೆಯ ಆಂಗ್ಲಭಾಷೆಯ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಮತಿ ಪಾವನರವರು ಮುಖ್ಯ ಅತಿಥಿಯವರ ಪರಿಚಯವನ್ನು ಮಾಡಿದರು. ಐಎಂಜೆಐಎಸ್‍ಸಿ ಸಂಸ್ಥೆಯ ಕನ್ನಡ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಮತಿ ಸುಮನಾರವರು ನಿರೂಪಿಸಿದರು.