Home » ಐಎಂಜೆ (IMJ) ವಿದ್ಯಾ ಸಂಸ್ಥೆ : ೭೭ನೇ ಗಣರಾಜ್ಯೋತ್ಸವ ಆಚರಣೆ
 

ಐಎಂಜೆ (IMJ) ವಿದ್ಯಾ ಸಂಸ್ಥೆ : ೭೭ನೇ ಗಣರಾಜ್ಯೋತ್ಸವ ಆಚರಣೆ

by Kundapur Xpress
Spread the love

ಮೂಡ್ಲಕಟ್ಟೆ : ಐಎಂಜೆ (IMJ) ವಿದ್ಯಾ ಸಂಸ್ಥೆಗಳು ಮೂಡ್ಲಕಟ್ಟೆ ಇಲ್ಲಿ ೭೭ನೇ ಗಣರಾಜ್ಯೋತ್ಸವವನ್ನು ಅತ್ಯಂತ ಗೌರವ ಹಾಗೂ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಸುಬೇದಾರ್ ಮೇಜರ್ ಶ್ರೀ ಶಂಕನಾಥ್ ಎಸ್. ನಾಗೇಕರ್ ಅವರು ಉಪಸ್ಥಿತರಿದ್ದು, ರಾಷ್ಟ್ರದ ಏಕತೆ, ಶಿಸ್ತು ಮತ್ತು ದೇಶಭಕ್ತಿಯ ಮಹತ್ವದ ಕುರಿತು ಹಾಗೂ “ಸಂವಹನದ ಭವಿಷ್ಯ ಮತ್ತು ಅಭಿವೃದ್ಧಿ ,ಕ್ಲೌಡ್ ಕಂಪ್ಯೂಟಿಂಗ್,ಉನ್ನತ ಭದ್ರತೆ ಮತ್ತು ನಿರ್ವಿಘ್ನ ಜಾಗತಿಕ ಸಂಪರ್ಕ ಕುರಿತು ಮಾತನಾಡಿದರು. ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಭಾರತೀಯ ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿ, ಅಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿದೆ ಎಂದು ತಮ್ಮ ಪ್ರೇರಣಾದಾಯಕ ಭಾಷಣವನ್ನು ನೀಡಿದರು. ಅವರ ಸೇವೆ ಹಾಗೂ ಕೊಡುಗೆಗಳನ್ನು ಗುರುತಿಸಿ, ಸಂಸ್ಥೆಯ ವತಿಯಿಂದ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ॥ ಎಸ್. ಎನ್. ಭಟ್ ,ಎಂ ಐ ಟಿ ಕೆ ಪ್ರಾಂಶುಪಾಲ ಡಾ॥ ರಾಮಕೃಷ್ಣ ಹೆಗ್ಡೆ , ಎಂ ಸಿ ಎನ್ ಪ್ರಾಂಶುಪಾಲರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್,ಐ ಎಂ ಜೆ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಪ್ರಾಂಶುಪಾಲರಾದ ಡಾ॥ ಪ್ರತಿಭಾ ಪಟೇಲ್ , ದೈಹಿಕ ಶಿಕ್ಷಣ ನಿರ್ದೇಶಕರು ಡಾ॥ ಆರ್.ನವೀನ್ ಮತ್ತು ಶ್ರೀ ಪ್ರವೀಣ್ ಖಾರ್ವಿ, ಕ್ಯಾಂಪಸ್ ವ್ಯವಸ್ಥಾಪಕರಾದ (ಸೇನೆಯಲ್ಲಿ ಸೇವೆ ಸಲ್ಲಿಸಿರುವ)ಸತ್ಯನಾರಾಯಣ ಮತ್ತು ದೀಪಕ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಎಂಸಿ ಸುಷ್ಮಾ ಉಪಾಧ್ಯಾಯ ಅವರು ನಿರ್ವಹಿಸಿದರು. ಗಣರಾಜ್ಯೋತ್ಸವದ ಆಚರಣೆ ರಾಷ್ಟ್ರಭಕ್ತಿಗೀತೆಗಳೊಂದಿಗೆ ಸಮಾರೋಪಗೊಂಡಿತು.

 

Related Articles

error: Content is protected !!