Home » ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾನಿಲಯ
 

ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾನಿಲಯ

by Kundapur Xpress
Spread the love

ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾನಿಲಯ

ಕುಂದಾಪುರ: ಪ್ಲೆಸ್‍ಮೆಂಟ್ ಮತ್ತು ಟ್ರೆನೀಂಗ್ ವಿಭಾಗವು ಬೆಂಗಳೂರಿನ ಬಿ.ಎಂ.ಎಸ್ ಕಾಲೀಜಿನ ಪ್ಲೆಸ್‍ಮೆಂಟ್ ಡಿನ್ ಆದ ಡಾ. ಪ್ರದೀಪಾರಿಂದ ವಿದ್ಯಾರ್ಥಿಗಳಿಗೆ ಪ್ಲೆಸ್‍ಮೆಂಟ್‍ನ ಟಿಪ್ಸ್ ಮತ್ತು  ಟ್ರಿಕ್ಸಗಳ ಮೇಲೆ ವಿಶೇಷ ಉಪನ್ಯಾಸ ಏರ್ಪಡಿಸಿದ್ದರು.  ಡಾ. ಪ್ರದೀಪಾರವರು ವಿದ್ಯಾರ್ಥಿಗಳಿಗೆ ತಾವು ಯಾವ ಕಂಪನಿಯಲ್ಲಿ ಕೆಲಸವನ್ನು ನೀರೀಕ್ಷಿಸುತ್ತೀರೊ ಆ ಕಂಪನಿಯ ಬಗ್ಗೆ ಹಾಗೂ ತೆಗೆದುಕೊಳ್ಳುವ ಜವಬ್ದಾರಿಯ ಬಗ್ಗೆ ಆದಷ್ಟು ತಿಳಿದುಕೊಂಡೇ ಕ್ಯಾಂಪಸ ಪ್ಲೆಸ್‍ಮೆಂಟ್‍ಗೆ ಹೋದರೆ ಒಳ್ಳೆಯದು ಎಂದು ಹೇಳಿದರು. ಅತ್ಯಂತ ಹಿಂದುಳಿದ  ಪ್ರದೇಶದಿಂದ ಬಂದು ಭಾರತದಲಿಯೇ ಒಂದು ಅತ್ಯುತಮ ವಿದ್ಯಾ ಸಂಸ್ಥೆಯಲ್ಲಿ ಡಿನ್ ಆಗಿರುವ ತಮ್ಮ ಉದಾಹಣೆಯನ್ನೇ ನೀಡಿ, ವಿದ್ಯಾರ್ಥಿಗಳು ತಮ್ಮಲಿರುವ ಕೀಳರಿಮೆಯನ್ನು ಆದಷ್ಟು ಬೇಗ ತೋರೆದು ಎಲ್ಲಾ ಚಟುವಟಿಕೆಗಳಲ್ಲಿ ಬಾಗವಹಿಸಬೇಕೆಂದು ಸಲಹೆ ನೀಡಿದರು.

ವಿವಿಧ ಸರ್ಟಿಫಿಕೆಟ್ ಕೊರ್ಸಗಳನ್ನು ಮಾಡಿ, ಕೌಶಲ್ಯ ಅಭಿವೃದ್ಧಿ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಬೇಕು. ಯಾವ ಸಾಧನೆಗೂ ಕಠಿಣ ಪರಿಶ್ರಮವೇ  ಸನಿಹ ದಾರಿ ಎಂದರಲ್ಲದೇ, ಪ್ರಯತ್ನವಿಲ್ಲದೇ ಯಾವ ಸಾಧನೆಯೂ ಅಸಾಧ್ಯ ಎಂದರು. ಕಂಪನಿಗೆ ತಕ್ಕ ಬಯೋಡೆಟಾ ತಯಾರಿ ಮಾಡಿಕೊಂಡರೆ ಉತ್ತಮ ಎಂದು ಹೇಳಿದರು. ನಿಮ್ಮ ಕಾಲಿನ ಮೇಲೆ ನೀವು ನಿಲ್ಲುವುದನ್ನು ಸಮಾಜ ಗೌರವಿಸುತ್ತದೆ ಎಂದು ಒತ್ತಿ ಹೇಳಿದರು. ಡಾ. ಅಬ್ದುಲ್ ಕರೀಮ್‍ರವರು ಮಾತಾಡಿ ಪ್ರಸ್ತುತ ಎಲ್ಲಾ ವಿಭಾಗದವರಿಗೂ ಉದ್ಯೋಗವಕಾಶವಿದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಪ್ರೊ. ಅಮೃತಮಾಲಾ ಡೀನ್ ಟಿ.ಪಿ.ಐ.ಆರ್

ಎಂ.ಐ.ಟಿ.ಕೆ ಹಾಗೂ ಪ್ರೊ. ಅಕ್ಷತಾ ನಾಯಕ್ ಸಂಯೋಜಿಸಿದ್ದಾರೆ.

   

Related Articles

error: Content is protected !!