ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಸಂಸ್ಥೆ ಮೂಡ್ಲಕಟ್ಟೆ ಕ್ರೀಡಾ ಸಂಘ ಮತ್ತು ಯೋಗ ಹಾಗೂ ಆಧ್ಯಾತ್ಮ ವೇದಿಕೆಯ ಅಡಿಯಲ್ಲಿ ಸ್ವಯಂ ರಕ್ಷಣೆ ವಿಷಯದ ಕುರಿತು ಕಾರ್ಯಗಾರ ಜರುಗಿತು. ಹೆಸರಾಂತ ಕರಾಟೆಯ ಸಾಧಕರು ಹಾಗೂ ಉಡುಪಿ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಯುತ ಕಿರಣ್ ಕುಂದಾಪುರ ರವರು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಮಹತ್ತರ ಸ್ಥಾನದಲ್ಲಿರುವ ಕರಾಟೆ ಮತ್ತು ಸ್ವಯಂ ರಕ್ಷಣೆಯ ಕಲೆಯನ್ನು ಕೇಂದ್ರ ವಿಷಯವನ್ನಾಗಿಟ್ಟುಕೊಂಡು ಅದರ ಪ್ರಯೋಜನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯ ಕರಾಟೆ ತರಬೇತುದಾರರು ಮತ್ತು ಎಸ್ ಬಿ ಐ ಜೀವನ ಸಲಹೆಗಾರರಾದ ಶ್ರೀಯುತ ಸಂದೀಪ್ ವಿ ಕಿರಣ್ ರವರು ಕರಾಟೆಯ ಮೂಲಕ ಸ್ವಯಂ ರಕ್ಷಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.
ವೇದಿಕೆಯಲ್ಲಿ ಶ್ರೀಮತಿ ಸವಿತಾ ಖಾರ್ವಿ ಕರಾಟೆಯ ತರಬೇತುದಾರರು, ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್, ಉಪ ಪ್ರಾಂಶುಪಾಲರಾದ ಪ್ರೊಫೆಸರ್ ಜಯಶೀಲ್ ಕುಮಾರ್, ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಖಾರ್ವಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಥಮ ಬಿ ಸಿ ಎ ವಿಭಾಗದ ವಿದ್ಯಾರ್ಥಿನಿಯಾದ ಭಾನುಮತಿ ಅವರ ಪ್ರಾರ್ಥಿಸಿದರು. ಪ್ರಥಮ ಬಿ ಸಿ ಎ ವಿದ್ಯಾರ್ಥಿನಿ ಸಿಂಚನ ಹಾಗೂ ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಪ್ರತಿಭಾ ರವರು ಅತಿಥಿಗಳ ಕಿರು ಪರಿಚಯವನ್ನು ಮಂಡಿಸಿದರು. ದ್ವಿತೀಯ ಬಿಸಿಎ ವಿಭಾಗದ ವಿದ್ಯಾರ್ಥಿನಿ ನೇತ್ರಾವತಿ ನಿರೂಪಿಸಿದರು. ಈ ಕಾರ್ಯಗಾರದಿಂದಾಗಿ ವಿದ್ಯಾರ್ಥಿಗಳು ಸ್ವ ರಕ್ಷಣೆಯ ಬಗ್ಗೆ ಆತ್ಮವಿಶ್ವಾಸ ಪಡೆದುಕೊಂಡರು