ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಘಟಕದಲ್ಲಿ ಆಯೋಜಿಸಿದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಶ್ರೀ ಬಿ. ಎನ್. ಶೆಟ್ಟಿ, ಹೆಚ್ಚುವರಿ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ನೆರವೇರಿಸಿದರು. ಶಿಕ್ಷಣದಿಂದ ರಾಷ್ಟ್ರಪ್ರೇಮವನ್ನು ಬೆಳೆಸುವ ಮೂಲಕ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾಲೇಜಿನ ಗವರ್ನಿಗ್ ಕೌನ್ಸಿಲ್ ಸದಸ್ಯರಾದ ಶ್ರೀ ಎನ್. ನಾರಾಯಣ್ ನಾಯಕ್, ಪ್ರಾಂಶುಪಾಲರಾದ ಪ್ರೊ|ಕೆ. ಉಮೇಶ್ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ , ಎನ್ಸಿಸಿ ಕೇರ್ ಟೇಕರ್ ಶ್ರೀ ಶರತ್ ಕುಮಾರ್, ಬೋಧಕ-ಬೋಧಕೇತರ ಸಿಬ್ಬಂದಿಗಳು, ಎನ್ಸಿಸಿ, ಎನ್ಎಸ್ಎಸ್, ರೇಂಜರ್ಸ್ ಮತ್ತು ರೋವರ್ಸ್ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕನ್ನಡ ಪ್ರಾಧ್ಯಪಕಿ ಶ್ರೀಮತಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.ಎನ್ಸಿಸಿ ಕ್ಯಾಡೆಟ್ ಸುಪ್ರೀತ್ ಕಮಾಂಡ್ ನೀಡಿ, ಪ್ರಖ್ಯಾತ ಮತ್ತು ಪ್ರವೀಣ್, ವಘ ಬಾರ್ಡರ್ ಪರೇಡ್ ಪ್ರಾತ್ಯಕ್ಷತೆ ತೋರಿಸಿದರು.