Home » CSEET ಸ್ಪರ್ಧಾತ್ಮಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
 

CSEET ಸ್ಪರ್ಧಾತ್ಮಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

by Kundapur Xpress
Spread the love

ಹೆಮ್ಮಾಡಿ ; ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಇವರು ನಡೆಸುವ CSEET ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿರುತ್ತಾರೆ.ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಅಭಿನಂದಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ಮಾತನಾಡಿ, ‘ವಿಜ್ಞಾನ ವಿಭಾಗದಂತೆ ವಾಣಿಜ್ಯ ವಿಭಾಗವು ಬಹಳಷ್ಟು ಪ್ರಮುಖವಾದದ್ದು,ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ CA/CS ಸ್ಪರ್ಧಾತ್ಮಕ ಪರೀಕ್ಷೆಗೆ ಅನುಭವಿಶಾಲಿ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತಿದ್ದು ಅವೆಲ್ಲದರ ಫಲಶ್ರುತಿಯೇ ಈ ಫಲಿತಾಂಶ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಶುಭ ಹಾರೈಸಿದರು’. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಉತ್ತಮ ವಾಗ್ಮಿಗಳಾಗಿರುವ ಶ್ರೀ ದಾಮೋದರ ಶರ್ಮಾರವರು ಮಾತನಾಡಿ,’ಕಲಿತ ಸಂಸ್ಥೆಯ ಮೇಲೆ ನಿಮಗಿರುವ ಅಭಿಮಾನ, ಗುರುಗಳ ಆಶೀರ್ವಾದ‌ ಸದಾ ನಿಮ್ಮೊಂದಿಗಿದ್ದಾಗ ನೀವು ಅಂದುಕೊಂಡಿದ್ದು ಈಡೇರಲು ಸಾಧ್ಯವಿದೆ.ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ,ಉತ್ತಮ ವ್ಯಕ್ತಿತ್ವ ನಿಮ್ಮದಾಗಲಿ,ಜೀವನದಲ್ಲಿ ಕಷ್ಟ ಪಟ್ಟಷ್ಟು ಸುಖ ನಿಮ್ಮದಾಗುತ್ತದೆ ಎಂದು ಶುಭ ಹಾರೈಸಿದರು’.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲರಾದ ಶ್ರೀ ರಮೇಶ ಪೂಜಾರಿ, ಬೋಧಕ/ಬೋಧಕೇತರ ವೃಂದದವರು ಸಾಧಕ ವಿದ್ಯಾರ್ಥಿಗಳು,ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಸಾಧಕ ವಿದ್ಯಾರ್ಥಿಗಳಾದ,ಧೀರಜ್ ಶೇಟ್,ಸುಜನ್,ಅರ್ಚನ್ ಕುಮಾರ್,ಮೈತ್ರಿ,ಅಕ್ಷೋಭ್ಯ,ವಿಶ್ಮಿತಾ,ಸ್ಪಂದನ್,ಶಾಶ್ವತ್,ಕೌಶಿಕ್ ಈ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿ ಪೋಷಕರನ್ನು ಗೌರವಿಸಿ ಅಭಿನಂದಿಸಲಾಯಿತು. ಉಪನ್ಯಾಸಕಿ ಶ್ರೀಮತಿ ಉಷಾ ಸ್ವಾಗತಿಸಿ,ಉಪನ್ಯಾಸಕ ಪ್ರತಾಪ್ ಸಾಧಕ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿ, ಉಪನ್ಯಾಸಕ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕ ಗುರುರಾಜ್ ವಂದಿಸಿದರು

   

Related Articles

error: Content is protected !!