ಹೆಮ್ಮಾಡಿ ; ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ಅಂತರಾಷ್ಟ್ರೀಯ ಮಟ್ಟದ ಯೋಗ ಪ್ರತಿಭೆ ಧನ್ವಿ ಪೂಜಾರಿ ಮರವಂತೆ ಗ್ರ್ಯಾಂಡ್ ಮಾಸ್ಟರ್ ಏಶಿಯಾ ಬುಕ್ ಆಫ್ ರೆಕಾರ್ಡ್ಸ್ ಪಡೆದಿರುತ್ತಾಳೆ.
ಧನ್ವಿ ಕೇವಲ 3 ವರ್ಷಗಳ ಅವಧಿಯಲ್ಲಿ ಎಲ್ಲಾ 23 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತಳಾಗಿ ಗ್ರ್ಯಾಂಡ್ ಮಾಸ್ಟರ್ ಎಂದು ಬಿರುದು ಪಡೆದಿದ್ದಾರೆ,ಅವಳ ಅದ್ಭುತವಾದ ಯೋಗ ಪ್ರದರ್ಶನದಿಂದಾಗಿ ಮಾರ್ಚ್ 27-2024 ರಂದು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನ್ನು ಸ್ವೀಕರಿಸಿದ್ದಾಳೆ.ಇವಳು ಶ್ರೀಮತಿ ಜ್ಯೋತಿ ಹಾಗೂ ಶ್ರೀ ಚಂದ್ರಶೇಖರ್ ಮರವಂತೆಯವರ ಪುತ್ರಿ.
ದಿನಾಂಕ:22-7-2024 ರಂದು ಕುಂದಾಪುರ ಮೊಗವೀರ ಭವನದಲ್ಲಿ ನಡೆದ ಜನತಾ ನವನೀತ 2K24 ವೈಭವದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನ್ನು ನೀಡಿ ಗೌರವಿಸಿದ್ದಾರೆ.