Home » ರಾಮಕೃಷ್ಣ ಬಿ.ಜಿ.ಯವರಿಗೆ ಉತ್ತಮ ಪ್ರಾಚಾರ್ಯ ಪ್ರಶಸ್ತಿ
 

ರಾಮಕೃಷ್ಣ ಬಿ.ಜಿ.ಯವರಿಗೆ ಉತ್ತಮ ಪ್ರಾಚಾರ್ಯ ಪ್ರಶಸ್ತಿ

by Kundapur Xpress
Spread the love

ಕುಂದಾಪುರ : 2024-25ನೇ ಸಾಲಿನ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ಥಿಗೆ ಪ್ರತಿಷ್ಠಿತ ಪದವಿಪೂರ್ವ ಕಾಲೇಜು ಕುಂದಾಪುರ ಇಲ್ಲಿನ ಪ್ರಾಚಾರ್ಯರಾದ ರಾಮಕೃಷ್ಣ ಬಿ.ಜಿ.ಯವರು ಭಾಜನರಾಗಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳೆಯೂರಿನ ಶ್ರೀ ಗಣಪತಿ ಬಿ.ಆರ್.‌ ಹಾಗೂ ಶ್ರೀಮತಿ ಜಯಲಕ್ಷ್ಮಿಯವರ ಸುಪುತ್ರರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಳೆಯೂರಿನಲ್ಲಿ, ಪದವಿ ಮತ್ತು ಸ್ನಾತಕೋತ್ತರ ಅಧ್ಯಯನವನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದವರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ.ಯ ತರ್ಕಶಾಸ್ತ್ರ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಶತಮಾನೋತ್ತರ ಬೆಳ್ಳಿಹಬ್ಬವನ್ನು ಆಚರಿಸಿಕೊಂಡ ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಭೌತಿಕ ಮತ್ತು ಬೌದ್ಧಿಕ ಉನ್ನತಿಗೆ ಇವರ ಪರಿಶ್ರಮ ಗಮನಾರ್ಹವಾದುದು. ಈ ವಿದ್ಯಾಲಯದಲ್ಲಿ 1391 ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ ಬೇಡಿಕೆ ಇರುವ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಹೊಸ ಸಂಯೋಜನೆಗಳು (ಕಂಪ್ಯೂಟರ್‌ ಸೈನ್ಸ್‌ ಮತ್ತು ಸಂಖ್ಯಾಶಾಸ್ತ್ರ) ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಜಿಲ್ಲಾ ಪಂಚಾಯತ್‌ ಉಡುಪಿ ಮತ್ತು ಪುರಸಭೆ ಕುಂದಾಪುರ ಇವರ ಸಹಯೋಗದೊಂದಿಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ CET/NEET/JEE ಪರೀಕ್ಷೆಗಳಿಗೆ ಆನ್‌ಲೈನ್‌ ತರಬೇತಿಗಳು, ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯವಿರುವ 20000ಕ್ಕೂ ಮೀರಿದ ಅಮೂಲ್ಯವಾಗಿರುವ ಪುಸ್ತಕಗಳ ಗ್ರಂಥ ಭಂಡಾರ – ಹೀಗೆ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕ್ರಿಯಾತ್ಮಕ ಹಾಗೂ ಪ್ರಯೋಗಶೀಲ ಕ್ರಮಗಳನ್ನು ಕೈಗೊಂಡು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಮುಂದಿನ ಶಿಕ್ಷಣಕ್ಕೆ ಪೂರಕ ಸಹಕಾರ ನೀಡುವ ಪ್ರಯತ್ನ ಮಾಡಿದ್ದಾರೆ.

 

Related Articles

error: Content is protected !!