ಕಲ್ಲಡ್ಕ : ವಿದ್ಯೆಯ ಉಪಯೋಗ ಸರಿಯಾಗಿ ಆಗದಿದ್ದರೆ ವಿನಾಶ ತಪ್ಪಿದ್ದಲ್ಲ, ವಿದ್ಯೆಯಿಂದ ಗುಣವಂತರಾಗಬೇಕು. ಚತುರನಾಗಬೇಕು. ಶಕ್ತಿವಂತನಾಗಬೇಕು. ಶಕ್ತಿವಂತನು ಕ್ಷಮಾಗುಣವನ್ನು ಹೊಂದಿರಬೇಕು. ಶಕ್ತಿಯಿಲ್ಲದಿದ್ದರೆ ಕ್ಷಮಿಸಲು ಸಾಧ್ಯವಿಲ್ಲ. ಶಕ್ತಿಯಿಂದ ದುರ್ಬಲರ ರಕ್ಷಣೆಯಾಗಬೇಕು. ಬುದ್ದಿಗೆ ಸರಿಯಾದ ಸಂಸ್ಕಾರ ನೀಡಬೇಕು.
ಕಲಿತು ಪಂಡಿತನಾದರೆ ಸಾಲದು. ಸಕಲ ಜೀವಿಗಳನ್ನು ಪ್ರೀತಿಸಬೇಕು. ಇಂತಹ ಸಂಸ್ಕಾರದಿಂದ ವಿಶ್ವವೇ ಕುಟುಂಬವೆಂದು, ಸರ್ವರೂ ಸುಖಿಗಳಾಗಬೇಕೆಂಬ ಶಿಕ್ಷಣ ಭಾರತೀಯ ಪರಂಪರೆಯಿಂದ ಬೆಳೆದು ಬಂದಿದ್ದು ವಿದ್ಯೆಯು ದೇಶದ ಎಳಿಗೆಗೆ ಭದ್ರ ಬುನಾದಿಯಾಗಲಿ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತ್ ಹೇಳಿದ್ದಾರೆ
ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಿ ಪರಿಚಯಿಸಿದರು. ಸಂಚಾಲಕ ವಸಂತ ಮಾಧವ ಸ್ವಾಗತಿಸಿದರು. ಅಧ್ಯಕ್ಷ ನಾರಾಯಣ ಸೋಮಯಾಜಿ ಸರಸಂಘ ಚಾಲಕರಿಗೆ ಸ್ಮರಣಿಕೆ ನೀಡಿದರು. ರಾಧಾಕೃಷ್ಣ ಅಡ್ಯಂತಾಯ, ಜಿನ್ನಪ್ಪ ಶ್ರೀಮಾನ್ ನಿರೂಪಿಸಿದರು.