Home » ಕೆ ಪಿ ಎಸ್ ಕೋಟೇಶ್ವರ ಮಾಹಿತಿ ಕಾರ್ಯಗಾರ
 

ಕೆ ಪಿ ಎಸ್ ಕೋಟೇಶ್ವರ ಮಾಹಿತಿ ಕಾರ್ಯಗಾರ

ಮಾದಕ ದ್ರವ್ಯಗಳಿಂದ ಯುವಪೀಳಿಗೆಯ ಬದುಕು ದುಸ್ತರ : ಅನಿತಾ ನರೇಂದ್ರ ಕುಮಾರ್ .

by Kundapur Xpress
Spread the love

ಕೋಟೇಶ್ವರ : ಭಾರತದ ಭವಿಷ್ಯ ನಿಂತಿರುವುದೇ ಯುವಜನತೆಯ ಧೀಶಕ್ತಿಯ ಮೇಲೆ. ಎಚ್ಚತ್ತ ಯುವ ಚೇತನ ಸ್ವಾಮಿ ವಿವೇಕಾನಂದರ ಯುವ ನಾಡನ್ನು ಮಾದಕ ದ್ರವ್ಯಗಳು ತಮ್ಮ ಕಪಿಮುಷ್ಠಿಯಲ್ಲಿ ಬಂಧಿಸಿ ವಯಸ್ಕ ಭಾರತೀಯರನ್ನು ರೋಗಿಷ್ಟರನ್ನಾಗಿಸುವ ಮಾದಕ ದ್ರವ್ಯಗಳು ನಮ್ಮನ್ನೇ ಆಪೋಶನಗೈಯ್ಯುವ ಮಟ್ಟಿಗೆ ಬೆಳೆದು ಬಿಟ್ಟಿವೆ.ಅವುಗಳ ಕಬಂಧ ಬಾಹುಗಳಿಂದ ನಾವು ಹೊರಬರಬೇಕಿದೆ ಎಂದು ಸುಜ್ಞಾನ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಅನಿತಾ ನರೇಂದ್ರ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಅವರು ಕೋಟೇಶ್ವರ ಪಬ್ಲಿಕ್ ಸ್ಕೂಲ್ ನ ಪ್ರೌಢ ಶಾಲಾ ವಿಭಾಗದ ಎನ್.ಎಸ್.ಎಸ್.ಘಟಕ ಮತ್ತು ರೋಟರಿ ಕ್ಲಬ್ ಆಫ್ ಕುಂದಾಪುರ ಸನ್ ರೈಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ”ಮಾದಕ ದ್ರವ್ಯ ವ್ಯಸನ ಜಾಗೃತಿ “ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಚಟುವಟಿಕೆಯುಕ್ತ ಸಂವಾದ ನಡೆಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಮಾದಕ ದ್ರವ್ಯ ವ್ಯಸನದ ವಿರುದ್ಧದ ಪ್ರತಿಜ್ಞೆ ಬೋಧಿಸಿದರು.
ರೊಟೇರಿಯನ್ ಗುರುರಾಜ್ ಕೊತ್ವಾಲ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಭಿವೃದ್ಧಿ ಸಂಸ್ಥೆ ಹಂಗಾರಕಟ್ಟೆಯ ಸದಸ್ಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ರಮಾನಂದ ನಾಯಕ್ ಸರ್ವರನ್ನು ಸ್ವಾಗತಿಸಿದರು.ಪೂಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಅಭಿವೃದ್ಧಿ ಸಂಸ್ಥೆಯ ಧನ್ಯ ಬೆಳ್ಮಣ್ ನಿರೂಪಿಸಿದರು.ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಶಿಕ್ಷಕ ಸಿಬ್ಬಂದಿಗಳು,ವಿದ್ಯಾರ್ಥಿಗಳು, ಎನ್ ಎಸ್ ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

 

Related Articles

error: Content is protected !!