Home » ಕೆಪಿಎಸ್ ಕೋಟೇಶ್ವರ ಗಣಿತ ಕಾರ್ಯಾಗಾರ
 

ಕೆಪಿಎಸ್ ಕೋಟೇಶ್ವರ ಗಣಿತ ಕಾರ್ಯಾಗಾರ

ಸರಳ ಬೋಧನಾ ಕೌಶಲ್ಯ ರೂಡಿಸಿಕೊಳ್ಳಿ- ಶೋಭಾ ಎಸ್ ಶೆಟ್ಟಿ

by Kundapur Xpress
Spread the love

ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ಕುಂದಾಪುರ ವಲಯದ ಗಣಿತ ಶಿಕ್ಷಕರಿಗಾಗಿ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್ ಶೆಟ್ಟಿ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಗಣಿತ ವಿಷಯ ಕಬ್ಬಿಣದ ಕಡಲೆ ಎನ್ನುವ ಭೂತ ಪ್ರಾಥಮಿಕ, ಪ್ರೌಢ ಹಂತದ ವಿದ್ಯಾರ್ಥಿಗಳಲ್ಲಿದ್ದು, ಇದರಿಂದ ವಿದ್ಯಾರ್ಥಿಗಳನ್ನು ಹೊರ ಕರೆತಂದು ಇಷ್ಟಪಡುವ ರೀತಿಯಲ್ಲಿ ಸರಳ ಬೋಧನೆಯ ಕೌಶಲ್ಯವನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದು ಕುಂದಾಪುರ ವಲಯದ ಸಮಸ್ತ ಗಣಿತ ಶಿಕ್ಷಕರಿಗೆ ಸಲಹೆ ನೀಡಿದರು

ಸಭೆಯ ಉದ್ಘಾಟನೆಯನ್ನು ಉದ್ಯಮಿ ಕೊರ್ಗಿ ವಿಠ್ಠಲ ಶೆಟ್ಟಿ ದೀಪ ಬೆಳಗುವುದರ ಮೂಲಕ ನೆರವೇರಿಸಿದರು ಸಭೆಯಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಕುಂದಾಪುರ ವಲಯದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಕೆಪಿಎಸ್ ಕೋಟೇಶ್ವರದ ಬಾಬು ಶೆಟ್ಟಿ ನಾಗರಾಜ್ ಶೆಟ್ಟಿ ಬಸ್ರೂರು ಅಜಯ್ ಕುಮಾರ್ ಶೆಟ್ಟಿ ಕೊಂಡ್ಲೂರು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಬದಲಾದ ಪಠ್ಯಕ್ರಮ ಪಾಸಿಂಗ್ ಪ್ಯಾಕೇಜ್ ಪ್ರಶ್ನೆ ಪತ್ರಿಕೆ ಮಾದರಿ ಎನ್ ಎಂ ಎಂ ಎಸ್ , ಎನ್ ಟಿ ಎಸ್ ಇ ಪರೀಕ್ಷೆಗಳ ಬಗ್ಗೆ ಶಿಕ್ಷಕರಿಗೆ ಮಾಹಿತಿಗಳನ್ನು ನೀಡಿದರು ಗಣಿತ ಅಧ್ಯಾಪಕಿ ರೇಷ್ಮಾ ಕಾರ್ಯಕ್ರಮ ನಿರ್ವಹಿಸಿ ಶ್ರೀಕಾಂತ್ ಸ್ವಾಗತಿಸಿ ಶಿಕ್ಷಕಿ ದಿವ್ಯ ಪ್ರಭಾ ವಂದಿಸಿದರು

   

Related Articles

error: Content is protected !!