Home » ಗಾಂಧೀ ಮತ್ತು ಶಾಸ್ತ್ರೀ ಜಯಂತಿ
 

ಗಾಂಧೀ ಮತ್ತು ಶಾಸ್ತ್ರೀ ಜಯಂತಿ

by Kundapur Xpress
Spread the love

ಕುಂದಾಪುರ : ಯಡಾಡಿ ಮತ್ಯಾಡಿಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಅಗಸ್ಟೀನ್ ಕೆ.ಎ ಅವರು  ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು

” ಇಂದು ನಾವು ಈ ದೇಶದ ಅಪ್ರತಿಮ ಸಾಧಕರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದು, ಅವರ ಜೀವನದ ತತ್ತ್ವಾದರ್ಶಗಳು, ವಿಚಾರಧಾರೆಗಳು, ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹಾನ್ ಸಾಧಕರಾಗ ಬೇಕು ಅಲ್ಲದೆ ಕಸ ಮುಕ್ತ ಪರಿಸರ ನಿರ್ಮಾಣವಾಗಲು ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ”

ಶಾಲೆಯ  ಶಿಕ್ಷಕರಾದ ಪ್ರದೀಪ್ ಹಾಗೂ ದೀಕ್ಷಾ ಇವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಸಂದೇಶದ  ಕುರಿತು ಮಕ್ಕಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಹುಣ್ಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ  ಮತ್ತು ಕ್ರೀಡೆಯಲ್ಲಿ  ಹಾಗೂ ಹಟ್ಟಿಯಂಗಡಿಯ ಸಿದ್ಧಿ ವಿನಾಯಕ ಶಾಲೆಯ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ  ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡಿದ್ದು ಅದನ್ನು ಸಾಧಕರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ  ಪ್ರಾಥಮಿಕ ವಿಭಾಗದ ಸಂಯೋಜಕರಾದ ಪ್ರೀತಿ ಭಂಡಾರಿ ಹಾಗೂ ಕನ್ನಡ ಶಿಕ್ಷಕರಾದ ಶರತ್ ಕುಮಾರ್ ರವರು ಉಪಸ್ಥಿತರಿದ್ದರು .

ಸುಂದರವಾದ ವೇದಿಕೆಯನ್ನು ಚಿತ್ರ ಕಲಾ ಶಿಕ್ಷಕರಾದ ಗಿರೀಶ್ ರವರು ನಿರ್ಮಿಸಿದರು .ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ- ಶಿಕ್ಷಕೇತರ ವೃಂದದವರು , ಪೋಷಕರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು ಹಿನ್ನಲೆ ಸಂಗೀತವಾಗಿ  ತಬಲ ವಾದನದಲ್ಲಿ ಸೃಜನಶೀಲ ವಿದ್ಯಾರ್ಥಿಯಾದ ಅಕ್ಷರ್ ಎನ್ ರವರು ಸಹಕರಿಸಿದರು. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ‘ರಘುಪತಿ ರಾಘವ ರಾಜಾರಾಮ್ ‘ಭಜನೆಗೆ ಧ್ವನಿಗೂಡಿಸಿದರು.ಕಾರ್ಯಕ್ರಮವನ್ನು ವಿದ್ಯಾರ್ಥಿಯಾದ ಶ್ರೇಯಸ್ ಚಿಕ್ಕಮಠ ಸ್ವಾಗತಿಸಿ, ವಿಜ್ಞಾನ ಶಿಕ್ಷಕಿಯಾದ ಸವಿತಾ ಶೆಟ್ಟಿಯವರು ನಿರೂಪಿಸಿ, ವಿದ್ಯಾರ್ಥಿನಿ ಶ್ರೀಶರವರು ವಂದಿಸಿದರು.

   

Related Articles

error: Content is protected !!