ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ವಿದ್ಯಾರ್ಥಿಗಳು : ತಾಲೂಕು ಮಟ್ಟದ ಸಾಧನೆ

by Kundapur Xpress
Spread the love

ತೆಕ್ಕಟ್ಟೆ : ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿ ಇವರ ವತಿಯಿಂದ ಗಣೇಶ ಚತುರ್ಥಿಯ ಅಂಗವಾಗಿ ನಡೆಸಿದ ತಾಲೂಕು ಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 9 ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ವಿಜೇತ ವಿದ್ಯಾರ್ಥಿಗಳ :

– ಇಂಗ್ಲಿಷ್ ಭಾಷಣ – ಸ್ಪರ್ಶ್ – ಪ್ರಥಮ
– ಹಿಂದಿ ಭಾಷಣ – ತೃಪ್ತಿ ಶೆಟ್ಟಿ – ದ್ವಿತೀಯ
– ಹಿಂದಿ ಭಾಷಣ – ಡಿ. ಸಾನ್ವಿ – ತೃತೀಯ
– ದೇಶಭಕ್ತಿ ಗೀತೆ – ಸುಮೇಧ ತುಂಗಾ – ದ್ವಿತೀಯ
– ರೋಪ್ ಸ್ಕಿಪ್ಪಿಂಗ್ – ಪ್ರತ್ಯುಷ್ – ಪ್ರಥಮ
– ಸುಡೊಕು – ವನ್ಮಯಿ – ದ್ವಿತೀಯ
– ಯೋಗ – ಅಕ್ಷತ ಪೈ – ಪ್ರಥಮ
– ಗೂಡು ದೀಪ ಧ್ಯಾನ್ – ತೃತೀಯ
– ರೂಬಿಕ್ಸ್ ಕ್ಯೂಬ್ – ಪ್ರಜ್ವಲ್ – ತೃತೀಯ

ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ನಿರ್ದೇಶಕ ಹರೀಶ್ ಮರವಂತೆ ಹಾಗೂ ಶಾಲಾ ಪ್ರಾಂಶುಪಾಲರಾದ ಸಂದೀಪ್ ಪುತ್ರನ್ ಅಭಿನಂದಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

 

Related Articles

error: Content is protected !!