ಕುಂದಾಪುರ : ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ -ತಾಂತ್ರಿಕ ಹಾಗೂ ಮ್ಯಾನೇಜ್ ಮೆಂಟ್ ಸ್ಪರ್ಧಾಕೂಟ ವಿಜೃಂಭಣೆಯಿಂದ ಜರುಗಿದ್ದು ಎರಡನೆಯ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಯಿತು.. ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ,ಕಾರ್ಯಕ್ರಮದ ಸಂಚಾಲಕ, ಉಪ ಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ, ಈ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ವಿಭಾಗದಲ್ಲಿ 25ಕ್ಕೂ ಹೆಚ್ಚಿನ ಸ್ಪರ್ದೆಗಳನ್ನು ನಡೆಸಿದ್ದು 30ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು. ಅವುಗಳಲ್ಲಿ ಹೆಚ್ಚು ಆಕರ್ಷಣೆಯ ಸ್ಪರ್ದೆಯಾದ ವೆರೈಟಿ ಶೋ ಅಲ್ಲಿ ಡಾ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಪ್ರಥಮ ಸ್ಥಾನ ಗಳಿಸಿದರೆ , ಎಮ್ ಜಿ ಎಮ್ ಕಾಲೇಜು ಉಡುಪಿ ದ್ವಿತೀಯ ಸ್ಥಾನ ಪಡೆಯಿತು. ಎಲ್ಲ ಸ್ಪರ್ದೆಯ ವಿಜೇತರುಗಳಿಗೆ ಕ್ಯಾಶ್ ಪ್ರೈಸ್ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಾಂಸ್ಕೃತಿಕ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಾ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು. ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭಟ್ಕಳ ರನ್ನರ್ ಆಗಿ ಹೊರ ಹೊಮ್ಮಿದರು. ವಿದ್ಯಾರ್ಥಿ ತೇಜಸ್ ಹಾಗೂ ಪ್ಲೇಸ್ಮೆಂಟ್ ಡೀನ್ ಪ್ರೊಫೆಸರ್ ಅಮೃತಮಾಲ ಕಾರ್ಯಕ್ರಮ ನಿರ್ವಹಿಸಿದರು
ಮೂಡ್ಲಕಟ್ಟೆ ಎಂಐಟಿಕೆ: ರಾಜ್ಯ ಮಟ್ಟದ ಸಾವಿಷ್ಕಾರ್ ಸಾಂಸ್ಕೃತಿಕ ಹಬ್ಬ ಸಮಾರೋಪ ಸಮಾರಂಭ
ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ -ತಾಂತ್ರಿಕ ಹಾಗೂ ಮ್ಯಾನೇಜ್ ಮೆಂಟ್ ಸ್ಪರ್ಧಾಕೂಟ ವಿಜೃಂಭಣೆಯಿಂದ ಜರುಗಿದ್ದು ಎರಡನೆಯ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಯಿತು.. ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ,ಕಾರ್ಯಕ್ರಮದ ಸಂಚಾಲಕ, ಉಪ ಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ, ಈ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ವಿಭಾಗದಲ್ಲಿ 25ಕ್ಕೂ ಹೆಚ್ಚಿನ ಸ್ಪರ್ದೆಗಳನ್ನು ನಡೆಸಿದ್ದು 30ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು. ಅವುಗಳಲ್ಲಿ ಹೆಚ್ಚು ಆಕರ್ಷಣೆಯ ಸ್ಪರ್ದೆಯಾದ ವೆರೈಟಿ ಶೋ ಅಲ್ಲಿ ಡಾ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಪ್ರಥಮ ಸ್ಥಾನ ಗಳಿಸಿದರೆ , ಎಮ್ ಜಿ ಎಮ್ ಕಾಲೇಜು ಉಡುಪಿ ದ್ವಿತೀಯ ಸ್ಥಾನ ಪಡೆಯಿತು. ಎಲ್ಲ ಸ್ಪರ್ದೆಯ ವಿಜೇತರುಗಳಿಗೆ ಕ್ಯಾಶ್ ಪ್ರೈಸ್ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಾಂಸ್ಕೃತಿಕ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಾ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು. ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭಟ್ಕಳ ರನ್ನರ್ ಆಗಿ ಹೊರ ಹೊಮ್ಮಿದರು. ವಿದ್ಯಾರ್ಥಿ ತೇಜಸ್ ಹಾಗೂ ಪ್ಲೇಸ್ಮೆಂಟ್ ಡೀನ್ ಪ್ರೊಫೆಸರ್ ಅಮೃತಮಾಲ ಕಾರ್ಯಕ್ರಮ ನಿರ್ವಹಿಸಿದರು