ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ನರ್ಸಿಂಗ್ ವೃತ್ತಿಗೆ ಪಾದರ್ಪಣೆ ಮಾಡುವ ಮೊದಲ ಹಂತವಾದ ದೀಪ ಬೆಳಗಿಸುವ ಮೂಲಕ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮವನ್ನು ಮೇ 12 “ಅಂತರಾಷ್ಟ್ರೀಯ ದಾದಿಯರ ದಿನ”ದಂದು ಆಯೋಜಿಸಲಾಯಿತು. ಮುಖ್ಯ ಅತಿಥಿಯವರಾದ ಡಾ. ಸುಜ ಕರ್ಕಡ, ಪ್ರಾಂಶುಪಾಲರು, ಸಿ ಎಸ್ ಐ ಲೋಂಬಾರ್ಡ್ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್, ಉಡುಪಿ. ಪ್ರೊ| ಧೋಮ ಚಂದ್ರಶೇಖರ್, ನಿರ್ದೇಶಕರು, ಐಎಂಜೆ ಸಮೂಹ ಸಂಸ್ಥೆ, ಪ್ರೊ| ಫಸಲ್ ರಹಮಾನ್ ಎಂ.ಟಿ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ. ಪ್ರೊ| ಜೆನಿಫರ್ ಫ್ರೀಡ ಮಿನೇಜೆಸ್, ಪ್ರಾಂಶುಪಾಲರು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಜೆನ್ನಿಫರ್ ಫ್ರೀಡಾ ಮಿನೇಜಸ್ ರವರು ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಜ್ಞಾ ಸ್ವೀಕಾರ ವಿಧಾನವನ್ನು ವಾಚಿಸುವ ಮೂಲಕ, ಅವರಿಗೆ ಸೇವೆ ಸಲ್ಲಿಸುವ ಸಲುವಾಗಿ ಜ್ಞಾನ, ಪ್ರೀತಿ, ಬದ್ಧತೆ,ಸಹಾನುಭೂತಿ, ಸಮರ್ಪಣೆ ಮತ್ತು ಶಿಸ್ತಿನ ಬೆಳಕನ್ನು ಬೆಳಗಿಸಿದರು. “ನಮ್ಮ ದಾದಿಯರು ನಮ್ಮ ಭವಿಷ್ಯ” ಎಂಬ ಧ್ಯೇಯೋದ್ದೇಶದೊಂದಿಗೆ ಅಂತರಾಷ್ಟ್ರೀಯ ದಾದಿಯರ ದಿನವನ್ನು ವಿಜ್ರಂಭಣೆಯಿಂದ ಆಚರಿಸಿದರು.
ಮುಖ್ಯ ಅತಿಥಿಯವರಾದ ಡಾ. ಸುಜ ಕರ್ಕಡ ರವರು “ ಬಿದಿರಿನ ಮರ ಮೊದಲು ತನ್ನ ಬೇರಿನ ಬುಡವನ್ನು ಗಟ್ಟಿಗೊಳಿಸಿ, ಹೆಮ್ಮರವಾಗಿ ಬೆಳೆಯುತ್ತದೆ. ಹಾಗೆಯೇ ನಾವು ಮೊದಲು ನಮ್ಮ ವಿದ್ಯಾಭ್ಯಾಸದ ಬುಡವನ್ನು ಗಟ್ಟಿಗೊಳಿಸಿ, ನಮ್ಮ ಶ್ರದ್ಧೆ, ಸೇವಾಮನೋಭಾವದ ಮನಸ್ಥಿತಿಯನ್ನು ಹೆಮ್ಮೆರವಾಗಿ ಬೆಳೆಸುವ ಮೂಲಕ ಇತರರಿಗೆ ಮಾರ್ಗದರ್ಶಿಗಳಾಗಿರಬೇಕು” ಎಂದು ತಿಳಿಸಿದರು.
ಪ್ರೊ| ದೋಮ ಚಂದ್ರಶೇಖರ್ ರವರು ವೈದ್ಯರಿಗಿಂತ ದಾದಿಯವರು ರೋಗಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ದಾದಿಯವರು ನಮ್ಮ ಜೀವನದ ಒಂದು ಭಾಗವಾಗಿದ್ದಾರೆ. ರೋಗಿಗಳ ಆರೈಕೆ, ಚಿಕಿತ್ಸೆ, ನಿರ್ವಹಣೆ ಹೀಗೆ ಅವರ ಮಹತ್ವದ ಕುರಿತು ತಿಳಿಸಿದರು.