Home » ಎಂಐಟಕೆ – ವಾರ್ಷಿಕೋತ್ಸವ
 

ಎಂಐಟಕೆ – ವಾರ್ಷಿಕೋತ್ಸವ

by Kundapur Xpress
Spread the love

 ಕುಂದಾಪುರ : ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾರ್ಷಿಕೋತ್ಸವ ನಡೆಯಿತು. ಪ್ರತಿಷ್ಠಿತ  ನಾಡೋಜ ಪ್ರಶಸ್ತಿ ಪುರಸ್ಕೃತ ಪ್ರೊ. ಕೆ. ಪಿ. ರಾವ್ ರವರು ಮುಖ್ಯ ಅತಿಥಿಗಳಾಗಿ ಆಮಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 6 ದಶಕಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೆಳವಣಿಗೆಯ ಬಗ್ಗೆ ಸಭಿಕರಿಗೆ ಸಮಗ್ರವಾಗಿ ವಿವರಿಸಿದರು. ಯಂತ್ರ ಕಲಿಕೆಯ ತತ್ವಗಳು ಮತ್ತು ಪ್ರಕ್ರಿಯೆಯ ಕುರಿತು ಅವರು ತಮ್ಮದೇ ಪ್ರಯೋಗಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದರು ಮತ್ತು ಎಐ ಅಭಿವೃದ್ಧಿಗೆ ದುಡಿದ ವ್ಯಕ್ತಿಗಳು ಮತ್ತು ಅವರ ಕೊಡುಗೆಯನ್ನು ಉಲ್ಲೇಖಿಸಿದರು

ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭವಾಯಿತು. ಪ್ರಾರಂಭದಲ್ಲಿ ಎಂಐಟಿಕೆ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂ ಸಂಸ್ಥೆಯ ವಾರ್ಷಿಕ ವರದಿಯನ್ನು ವಾಚಿಸಿ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ಎಲ್ಲ ಸಾಧಕರನ್ನು ಅಭಿನಂದಿಸಿದರು. ವರದಿಯ ಪ್ರಮುಖ ಅಂಶವೆಂದರೆ, ಕ್ಯೂ 2 ಸ್ಟ್ಯಾಂಡರ್ಡ್ ಜರ್ನಲ್‌ಗಳನ್ನೂ ಒಳಗೊಂಡ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಕಟಿಸಿದ ಇಂಟರ್ನ್ಯಾಷನಲ್ ಜರ್ನಲ್ ಪೇಪರ್ಸ್ ಗಳ ಸಂಖ್ಯೆ 20. ಇದು ಎಂಐಟಕೆ ಯ ಅತ್ಯುತ್ತಮ ತಾಂತ್ರಿಕ ಶಿಕ್ಷಣ ಬೋಧನಾ ಕ್ರಮದ ಶ ಬಗ್ಗೆ ತಿಳಿಸುತ್ತದೆ. ಈ ಸಂದರ್ಭದಲ್ಲಿ ಕ್ಯಾಂಪಸ್‌ ನಲ್ಲಿ ಉನ್ನತ ಮಟ್ಟದ ಅತ್ಯಾಧುನಿಕ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡಿದ ಅಧ್ಯಕ್ಷ ಶ್ರೀ ಸಿದ್ದಾರ್ಥ ಜೆ ಶೆಟ್ಟಿ ಅವರಿಗೆ ಪ್ರಾಂಶುಪಾಲರು ಧನ್ಯವಾದ ಅರ್ಪಿಸಿದರು.

ಎಂಐಟಿಕೆ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳನ್ನು ನೀಡಲು ಅವಿರತವಾಗಿ ಪ್ರಯತ್ನಿ ಸುತ್ತಿರುವ ಪ್ಲೇಸ್‌ಮೆಂಟ್ ವಿಭಾಗದ, ವಿಶೇಷವಾಗಿ ಡೀನ್ ಪ್ಲೇಸ್‌ಮೆಂಟ್, ಪ್ರೊ.ಅಮೃತಮಲಾ ಮತ್ತು ಪ್ಲೇಸ್‌ಮೆಂಟ್ ಅಧಿಕಾರಿ ಪ್ರೊ.ಅಕ್ಷತಾ ನಾಯಕ್ ಅವರನ್ನು ಶ್ಲಾಘಿಸಿದರು. ವಿದ್ಯಾರ್ಥಿ ಕಲ್ಯಾಣ ಡೀನ್ ಮತ್ತು ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ ಈ ಸಂದರ್ಭದಲ್ಲಿ ಮಾತನಾಡಿ ಶೈಕ್ಷಣಿಕ ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು

ಇದು ಉತ್ತಮ ಉದ್ಯೋಗ ಮತ್ತು ಭವಿಷ್ಯದ ವೃತ್ತಿಪರ ಬೆಳವಣಿಗೆಗೆ ಇತರ ಮೌಲ್ಯ ಸೇರ್ಪಡೆಗಳೊಂದಿಗೆ ಜೀವನಾಡಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಾರ್ಷಿಕ ಸಾಂಸ್ಕøತಿಕ ಸಂಭ್ರಮ ಮೃದುಲಾ, ಶೈಕ್ಷಣಿಕ ಸಾಧನೆ ಮತ್ತು ಕ್ರೀಡೆಯಲ್ಲಿನ ಸಾಧನೆಗಳಿಗೆ ಪ್ರಶಸ್ತಿ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜ, ವಿಭಾಗ ಮುಖಯಸ್ಥರು, ವಿದ್ಯಾರ್ಥಿಗಳು ಮತ್ತು ಆಹ್ವಾನಿತ ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ವಿದ್ಯಾರ್ಥಿನಿ ಫಾತಿಮಾ ತಹಸೀರ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು, ವಿದ್ಯಾರ್ಥಿನಿ ವಿನಿತಾ ನಾಯ್ಕ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು, ಕಾರ್ಯಕ್ರಮವನ್ನು ಪ್ರೊ. ಅಮೃತಮಲಾ ಸಂಯೋಜಿಸಿದ್ದರು

 

   

Related Articles

error: Content is protected !!